Chintamani : ಟೊಮೆಟೊ ತುಂಬಿಸಲು ಬಳಸುವ ಪ್ಲಾಸ್ಟಿಕ್ ಕ್ರೇಟ್‌ಗಳ ಕಳ್ಳತನದ ಆರೋಪದ ಮೇಲೆ ಚಿಂತಾಮಣಿ ನಗರಠಾಣೆ ಪೊಲೀಸರು (Chintamani Town Police) ಇಬ್ಬರನ್ನು ಬಂಧಿಸಿ, ಅವರಿಂದ 10 ಲಕ್ಷ ಬೆಲೆ ಬಾಳುವ 3500 ಟೊಮೆಟೊ ಖಾಲಿ ಕ್ರೇಟ್‌ಗಳು ಹಾಗೂ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಂತಾಮಣಿ ನಗರದ APMC ಮಾರುಕಟ್ಟೆಗೆ (APMC Market) ಪ್ರತಿದಿನ ಲಾರಿಗಳಲ್ಲಿ Tomato ಪೂರೈಕೆ ಆಗುತ್ತಿದ್ದು, ಟೊಮೆಟೊ ತುಂಬಿಸಲು ಬಳಸುವ ಪ್ಲಾಸ್ಟಿಕ್ ಕ್ರೇಟ್‌ಗಳ ಕಳ್ಳತನದ ದೂರುಗಳು ಈ ವ್ಯಾಪ್ತಿಯಲ್ಲಿ ದಾಖಲಾಗಿದ್ದವು.
Police DYSP ವಿ.ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ದೂರುಗಳ ಪತ್ತೆಗಾಗಿ ಇನ್‌ಸ್ಪೆಕ್ಟರ್ ರಂಗಶಾಮಯ್ಯ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ಚಂದ್ರಕಲಾ, ಅರುಣಗೌಡ ಪಾಟೀಲ್, ಸಿಬ್ಬಂದಿ ವಿಶ್ವನಾಥ್, ಚಂದ್ರಕುಮಾರ್, ಸುನೀತಾ, ರವೀಂದ್ರ, ಪವನ್ ಕುಮಾರ್, ಕೃಷ್ಣಮೂರ್ತಿ, ಎ.ಅಶೋಕ, ಆಂಜಿನಪ್ಪ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.