Chintamani, chikkaballapur : ಕನ್ನಡ ಚಿತ್ರರಂಗದ ಪವರ್‌ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ನಗರದ ವಿದ್ಯಾಗಣಪತಿ ಮಂದಿರದಲ್ಲಿ ಶಬರಿ ಜನ ಸೇವಾ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಯಿತು. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಶಿಬಿರ ಸಂಜೆ 5 ಗಂಟೆವರೆಗೆ ನಡೆಯಿತು. ಈ ವೇಳೆ ಒಟ್ಟು 78 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶಬರಿ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಶಬರೀಶ ಮಾತನಾಡಿ, “ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಪುನೀತ್ ರಾಜ್‌ಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರು ಕೇವಲ ನಟರಲ್ಲ, ಸಮಾಜಸೇವಕರೂ ಆಗಿದ್ದರು. ಅವರ ಸ್ಮರಣಾರ್ಥ ಆಯೋಜಿಸಿರುವ ರಕ್ತದಾನ ಶಿಬಿರ ನಿಜಕ್ಕೂ ಶ್ಲಾಘನೀಯ. ರಕ್ತಕ್ಕೆ ಪರ್ಯಾಯ ಜೀವದ್ರವ್ಯ ಇಂದಿಗೂ ಕಂಡುಬಂದಿಲ್ಲ — ರಕ್ತವೇ ಜೀವ ಉಳಿಸುವ ಔಷಧ. ಹೆಚ್ಚು ಜನರು ರಕ್ತದಾನ ಮಾಡಿದರೆ ಅಷ್ಟೇ ಜೀವ ಉಳಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಉಮಾಪತಿ, ಮಂಜುನಾಥ, ಮುಕ್ತಿಶಾ, ಗಾಯತ್ರಿ, ಮೇಘ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರು ಸಿ.ವಿ. ನಾಗರಾಜ್, ಸಂತೋಷ್, ಕಾಗತಿ ಶಬರೀಶ್, ವೇಣು, ಆಲಂಗಿರಿ ಸಂತೋಷ್, ಸಂದೀಪ್, ಮನೋಜ್, ಮಿಲ್ಕ್ ನರೇಂದ್ರ, ವಿಶ್ವನಾಥ್, ಗಿರೀಶ್, ಕಾಗತಿ ಮಂಜು ಹಾಗೂ ಕಾರಹಳ್ಳಿ ಮಧು ಸೇರಿದಂತೆ ಅನೇಕರು ಭಾಗವಹಿಸಿ ರಕ್ತದಾನ ಮಾಡಿ ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆಗೆ ಗೌರವ ಸಲ್ಲಿಸಿದರು.
