Gauribidanur : ಲಯನ್ಸ್ ಸಂಸ್ಥೆ, ಲಯನ್ಸ್ ಸೇವಾ ಟ್ರಸ್ಟ್, ಎನ್‌ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ರೆಡ್‌ಕ್ರಾಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಗೌರಿಬಿದನೂರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ (GFGC) ಸ್ವಯಂಪ್ರೇರಿತ ರಕ್ತದಾನ ಶಿಬಿರ (Blood Camp) ಹಮ್ಮಿಕೊಳ್ಳಲಾಗಿತ್ತು.
ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಪರಿಣಾಮ ಶಿಬಿರದಲ್ಲಿ ಒಟ್ಟು 108 ಯುನಿಟ್ ರಕ್ತ ಸಂಗ್ರಹವಾಯಿತು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಂಜೇಗೌಡ, ಪದಾಧಿಕಾರಿಗಳಾದ ಇಸ್ತೂರಿ ಸತೀಶ್, ಡಾ.ಗುಂಡುರಾವ್, ಸುರಾಜ್, ಶ್ರೇಣಿಕ್, ಮಂಜುನಾಥ್, ಸಂಕೇತ್ ಶ್ರೀರಾಮ್, ಜಗನ್ನಾಥ್, ಲಕ್ಷ್ಮಿ, ಕಾಲೇಜಿನ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.