Home News Chintamani ಶಾಲಾ ಬಸ್ ಡಿಕ್ಕಿ: ಮಹಿಳೆ ಸಾವು

ಶಾಲಾ ಬಸ್ ಡಿಕ್ಕಿ: ಮಹಿಳೆ ಸಾವು

0
Chintamani School bus Accident

Chintamani : ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಚೆಲುಮಕೋಟೆ ಬಳಿ ಸೋಮವಾರ ಖಾಸಗಿ ಶಾಲೆಯ ಬಸ್ ರಸ್ತೆ ಬದಿ ಮಹಿಳೆಗೆ ಡಿಕ್ಕಿ ಹೊಡೆದು (School Bus Accident) ನಂತರ ಟೆಲಿಪೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಚಿಂತಾಮಣಿ ನಗರದಿಂದ ಯಗವಕೋಟೆ ಕಡೆ ಹೋಗುತ್ತಿದ್ದ ನಗರದ ಎಸ್ಎನ್ಆರ್ ಖಾಸಗಿ ಶಾಲೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಜಾರಿ, ಗ್ರಾಮದಿಂದ ಕಟ್ಟಿಗೆ ತರಲು ಹೋಗಿ ವಾಪಸ್ ಬರುತ್ತಿದ್ದ ನಜ್ಮಾತಾಜ್‌ಗೆ ಡಿಕ್ಕಿ ಹೊಡೆದು. ನಂತರ ರಸ್ತೆ ಬದಿಯ ಟೆಲಿಪೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ಘಟನೆಯಲ್ಲಿ ಶಾಲಾ ಮಕ್ಕಳು ಅನಾಹುತದಿಂದ ಪಾರಾಗಿದ್ದು ಚಾಲಕ ಬಸ್‌ನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version