Chintamani : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ (SKDRDP) ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಸಿ.ಎಸ್.ಸಿ ಕೇಂದ್ರ (CSC Center) ಪ್ರಾರಂಭಿಸಲಾಯಿತು.
ಸರ್ಕಾರಿ ಸೌಲಭ್ಯ ಪಡೆಯಲು ಗ್ರಾಮೀಣ ಭಾಗದ ಜನರು ದಿನದ ಕೆಲಸ ತ್ಯಜಿಸಿ ಹಣ ಖರ್ಚು ಮಾಡಿಕೊಂಡು ತಾಲ್ಲೂಕು ಕಚೇರಿ ಅಥವಾ ನಾಡ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಸಿಎಸ್‌ಸಿ ಕೇಂದ್ರ ತೆರೆಯಲಾಗಿದೆ. ಕೇಂದ್ರದಲ್ಲಿ ಆಧಾರ್ ಕಾರ್ಡ್, ಈಶ್ರಮ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ, ಕೂಲಿ ಕಾರ್ಮಿಕರ ಗುರುತಿನ ಚೀಟಿ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿದ್ದು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಕೇಂದ್ರದ ಸದುಪಯೋಗ ಪಡೆದುಕೊಳ್ಳಿ ಎಂದು ಸಂಸ್ಥೆಯ ಮೇಲ್ವಿಚಾರಕ ದೇವೇಂದ್ರ ಪ್ರಸಾದ್ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಲ್ತಾನ್ ಷರೀಫ್, ಯೋಜನೆ ಅಧಿಕಾರಿ ಶಾರಿಕಾ, ಗ್ರಾ.ಪಂ. ಉಪಾಧ್ಯಕ್ಷ ನಾರಾಯಣಮ್ಮ, ಸದಸ್ಯರಾದ ಕೌಸರ್ ಷರೀಪ್, ಸಿ.ವಿ.ಆಂಜನಪ್ಪ, ಟಿ.ಎಚ್.ಹನುಮಂತಪ್ಪ, ಆರ್.ಟಿ.ವೆಂಕಟೇಶ್, ಸೇವಾ ಪ್ರತಿನಿಧಿಗಳಾದ ವಿ.ವೀಣಾ, ಸುಗುಣ, ಸರಸ್ವತಿ, ರತ್ನಮ್ಮ, ಅನುಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.