Chintamani : ಚಿಂತಾಮಣಿ ತಾಲ್ಲೂಕಿನ ಇರಗಂಪಲ್ಲಿ ಗ್ರಾಮ ಪಂಚಾಯಿತಿಯ (Iragampalli Grama Panchayat) ಅಧ್ಯಕ್ಷೆ ಸರಸ್ವತಮ್ಮ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ (Election) ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ (Dr. M.C. Sudhakar) ಬೆಂಬಲಿತ ಅಭ್ಯರ್ಥಿ ಸೀತಾರಾಂಪುರ ಶ್ಯಾಮಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು.
ಅಧ್ಯಕ್ಷೆ ಸೀತಾರಾಂಪುರ ಶ್ಯಾಮಲಾ ಮಾತನಾಡಿ “ಪ್ರತಿ ಗ್ರಾಮದಲ್ಲೂ ಕುಡಿಯುವ ನೀರು, ರಸ್ತೆ, ಸ್ವಚ್ಛತೆ ಮತ್ತು ದೀಪಗಳಿಗೆ ಆದ್ಯತೆ ನೀಡಿ, ಗ್ರಾಮಗಳಲ್ಲಿರುವ ಎಲ್ಲ ಮಕ್ಕಳು ವಿದ್ಯಾವಂತರು ಆಗಬೇಕು. ಗ್ರಾಮಗಳಲ್ಲೂ ಬಡಾವಣೆಗಳು ನಿರ್ಮಾಣವಾಗಬೇಕು ಎಂಬ ಎಂ.ಸಿ ಸುಧಾಕರ್ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತೇನೆ. ಅಭಿವೃದ್ಧಿ ಕೆಲಸ ಮಾಡಲು ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸಹಕಾರ ನೀಡಬೇಕು” ಎಂದು ಹೇಳಿದರು.
ನೂತನ ಅಧ್ಯಕ್ಷೆ ಶ್ಯಾಮಲಾ ಮತ್ತು ಸದಸ್ಯರು ಆಯ್ಕೆಯ ನಂತರ ಡಾ.ಎಂ.ಸಿ ಸುಧಾಕರ್ ಮನೆಗೆ ತೆರಳಿ ಕೃತಜ್ಞತೆ ಸಲ್ಲಿಸಿದರು. ಜಿ.ಪ. ಮಾಜಿ ಸದಸ್ಯರಾದ ಸ್ಕೂಲ್ ಸುಬ್ಬಾರೆಡ್ಡಿ, ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಘುನಾಥ ರೆಡ್ಡಿ, ಮಾದಮಂಗಲ ಚಂದ್ರಪ್ಪ, ಗ್ರಾ.ಪಂ. ಉಪಾಧ್ಯಕ್ಷ ನವೀನ್, ಮುಖಂಡರಾದ ಜೈರಾಮ್, ದಯಾನಂದರೆಡ್ಡಿ, ಗೆಂಗಿರೆಡ್ಡಿ, ಆನಂದರೆಡ್ಡಿ, ಕೃಷ್ಣಾರೆಡ್ಡಿ, ವೆಂಕಟರವಣ ಉಪಸ್ಥಿತರಿದ್ದರು.