Chintamani : ಚಿಂತಾಮಣಿ ನಗರದ ನೆಕ್ಕುಂದಿಪೇಟೆಯಲ್ಲಿ (Nekkundipete) ನೆಲೆಸಿರುವ ಶ್ರೀನಿವಾಸದೇವರ (Srinivasa) 83ನೇ ಬ್ರಹ್ಮ ರಥೋತ್ಸವವು (Brahma Rathotsava) ವಿಜೃಂಭಣೆಯಿಂದ ನಡೆಯಿತು. ರಥೋತ್ಸವಡಾ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ, ಅಭಿಷೇಕ, ಹೋಮ, ಹವನ, ಅಷ್ಟಾವಧಾನ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮದಿಂದ ನಡೆದವು.
ಮಧ್ಯಾಹ್ನ 1 ಗಂಟೆಗೆ ಸ್ವಾಮಿಯ ಉತ್ಸವಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ತಂದು ಅಲಂಕೃತ ರಥದಲ್ಲಿ ಕೂರಿಸಿ ರಥದಲ್ಲಿ ಮತ್ತೆ ಅಲಂಕಾರ, ಪೂಜೆ ನೆರವೇರಿಸಲಾಯಿತು. ದೇವಾಲಯದ ಧರ್ಮದರ್ಶಿ ಮಂಡಳಿಯ ಮುಖಂಡರು ಹಾಗೂ ಮುಜರಾಯಿ ಅಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಳಿಗ್ಗೆಯಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನೆಕ್ಕುಂದಿಪೇಟೆ ತಂಡದಿಂದ ಭಜನೆ, ಮಹಿಳೆಯರಿಂದ ಕೋಲಾಟ ರಥೋತ್ಸವಕ್ಕೆ ಮೆರುಗು ನೀಡಿತು. ಕಂದಾಯ ಇಲಾಖೆಯ ಅಧಿಕಾರಿಗಳು, ದೇವಾಲಯದ ಕನ್ವೀನರ್ ಕೆ.ಟಿ.ಪ್ರಕಾಶ್, ಮುಖಂಡರಾದ ಜೆ.ವಿಭಾಕರರೆಡ್ಡಿ, ವಿ.ಎಲ್. ಕೃಷ್ಣಸ್ವಾಮಿ, ಸಾದಲಿ ಶ್ರೀನಿವಾಸ್, ವೆಂಕಟೇಶ್, ಆರ್.ನಾರಾಯಣ ಸ್ವಾಮಿ, ಶ್ರೀಧರ್, ವೇಣುಗೋಪಾಲ್, ಸೀನಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur