Chintamani : ಚಿಂತಾಮಣಿ ತಾಲ್ಲೂಕಿನ ಚೊಕ್ಕರೆಡ್ಡಿಹಳ್ಳಿ ಹತ್ತಿರ ಸೋಮವಾರ ಸಂಜೆ ಎರಡು ದ್ವಿಚಕ್ರವಾಹನಗಳು (Two Wheelers) ಮುಖಾಮುಖಿ ಡಿಕ್ಕಿಯಾಗಿ (Accident) ಕಟ್ಟಿಗೇನಹಳ್ಳಿಯ ಮಂಜು(23) ಮತ್ತು ಚಿಲಕಲನೇರ್ಪು ಹೋಬಳಿಯ ನರೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಮಂಜು ಪಲ್ಸರ್ ವಾಹನದಲ್ಲಿ ಕಟ್ಟಿಗೇನಹಳ್ಳಿಯಿಂದ ಚಿಂತಾಮಣಿಗೆ ಬರುತ್ತಿದ್ದರು ಮತ್ತು ನರೇಶ್ ಡಿಸ್ಕವರ್ ವಾಹನದಲ್ಲಿ ಚಿಂತಾಮಣಿಯಿಂದ ಚಿಲಕಲನೇರ್ಪುಗೆ ಹೋಗುತ್ತಿದ್ದರು. ಚಿಕ್ಕರೆಡ್ಡಿಹಳ್ಳಿ ಬಳಿ ರಸ್ತೆ ತಿರುವಿನಲ್ಲಿ ಎರಡು ಗಾಡಿಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಎರಡು ವಾಹನಗಳು ಜಖಂಗೊಂಡಿವೆ. ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur