Chintamani : ಶನಿವಾರ ಚಿಂತಾಮಣಿ ತಾಲೂಕು ಕೈವಾರದ ಯೋಗಿನಾರೇಯನ ಮಠದಲ್ಲಿ (Yoginareyana Mutt, Kaiwara) ಡಾ.ಎಂ.ಆರ್.ಜಯರಾಂ ಅವರ ಸಂಕೀರ್ತನೆಯೊಂದಿಗೆ ಗುರುಪೂಜೆ ಸಂಗೀತೋತ್ಸವಕ್ಕೆ (Guru Puja Sangeetotsava) ಚಾಲನೆ ನೀಡಲಾಯಿತು.
ಉತ್ಸವದ ಬೆಳಗಿನ ಅವಧಿಯಲ್ಲಿ ಸುಪ್ರಭಾತ, ಗೋಪೂಜೆ, ಸದ್ಗುರು ಪೂಜೆ ನಡೆಯಿತು. ಮಠ, ಸಭಾಂಗಣ, ಆವರಣವನ್ನು ಸುಂದರವಾಗಿ ಅಲಂಕರಿಸಿ, ತಾತಯ್ಯನವರಿಗೆ ಮೊದಲ ಪೂಜೆ ಸಲ್ಲಿಸಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ತಾತಯ್ಯನವರ ಉತ್ಸವ ಮೂರ್ತಿಯನ್ನು ಸುಶ್ರಾವ್ಯವಾದ್ಯಗಳೊಂದಿಗೆ ಮಠದಿಂದ ಸಂಗೀತೋತ್ಸವ ಸಭಾಂಗಣದವರೆಗೆ ಕೊಂಡೊಯ್ಯಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ “ಅಹಂಕಾರ ತೊರೆಯುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಯೋಗಿನಾರೇಯನ ಯತೀಂದ್ರರು ಆಯ್ದ ಕೆಲವರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಭಕ್ತಿ, ಜ್ಞಾನ ಮತ್ತು ಆಧ್ಯಾತ್ಮಿಕತೆಯ ಮಹತ್ವವನ್ನು ಬೋಧಿಸಿದ್ದಾರೆ. ಸಂಗೀತೋತ್ಸವವು ಗುರುಗಳ ಪರಂಪರೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ ಮತ್ತು ಜನರು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ಅವಕಾಶವನ್ನು ಒದಗಿಸುತ್ತದೆ. ಹೆಸರಾಂತ ವಿದ್ವಾಂಸರಲ್ಲದೆ, ಗ್ರಾಮೀಣ ಪ್ರದೇಶದ ವ್ಯಕ್ತಿಗಳೂ ಭಾಗವಹಿಸಿ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ” ಎಂದು ಅವರು ತಿಳಿಸಿದರು.
ಮಧ್ಯಾಹ್ನ ನಡೆದ ಕಲಾಪದಲ್ಲಿ ಡಾ.ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಎಂ.ಗಾಯತ್ರಿ, ಶ್ರೀಮೌರ್ಯ ಟ್ರಸ್ಟ್ ಕೊಯರ್, ಲೀಲಾ ಲಕ್ಷ್ಮೀನಾರಾಯಣ, ಕೈವಾರ ರಾಮಣ್ಣ, ಎಂ.ಎಸ್ ಸೇರಿದಂತೆ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು. ಲಾವಣ್ಯ, ಕರಿಯಣ್ಣನವರ್ ವಾದ್ಯವೃಂದ, ಚಿಂತಲಪಲ್ಲಿ ಸಿಸ್ಟರ್ಸ್, ವರಲಕ್ಷ್ಮಿ, ಕೊಲಿಮಿ ಮಂಜುನಾಥಾಚಾರಿ, ಸತ್ಯನಾರಾಯಣ್, ಶ್ಯಾಮಲಾ ಶ್ರೀನಿವಾಸ್, ರಜನಿರೆಡ್ಡಿ ತಂಡ, ಕೆ.ಎಸ್.ಶ್ವೇತಾ, ಸಿ.ಆರ್.ನಟರಾಜ್, ಶಾಂತಲಾ ಅರಸ್, ಕೆ.ನಾರಾಯಣಕುಮಾರ್, ವಿದ್ಯಾ, ಲತಾ, ಎನ್.ಲೇಖನಾ ತಂಡ, ಮತ್ತು ಲಕ್ಷ್ಮೀ ಕೆಂಪರಾಜು ಪಾಲ್ಗೊಂಡಿದ್ದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಎ.ಚಂದನ್ ಕುಮಾರ್ ಮೈಸೂರು ಅವರಿಂದ ಕೊಳಲು ವಾದನ, ಡಾ.ಎಸ್.ವಿ.ಸಹನಾ ಅವರಿಂದ ವೀಣಾವಾದನ, ಗಾಯನ, ಭರತನಾಟ್ಯ, ಆದಿಚುಚನಗಿರಿ ಮಠದ ನಾರಾಯಣಧಾಮದ ಸಾಯಿಕೀರ್ತಿನಾಥ ಸ್ವಾಮೀಜಿ ಅವರಿಂದ ಹರಿಕಥೆ, ಎಂ.ಆರ್. ಸುಧಾ, ಅಧಿತಿ ಪ್ರಹ್ಲಾದ್, ಮತ್ತು ಡಿಆರ್ ರಾಜಪ್ಪರ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಕೆ.ಎಂ.ತ್ಯಾಗರಾಜ್, ಬಾಲಕೃಷ್ಣ ಭಾಗವತರ್, ಇತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.