Sidlaghatta : ಜಿಲ್ಲೆಯಲ್ಲಿ ರೈತರು ಅಪಾರ ಹಣ ತೆತ್ತು ಗೊಬ್ಬರಗಳನ್ನು ತಂದು ಬೆಳೆದಂತಹ ಟೊಮೇಟೊ ಹಣ್ಣಿನ ಬೆಲೆ ಕುಸಿದ ಕಾರಣದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಮತ್ತು ಜಿಲ್ಲೆಯಲ್ಲಿ ಎಚ್.ಎನ್.ವ್ಯಾಲಿ ಮತ್ತು ಕೆ. ಸಿ. ವ್ಯಾಲಿ ನೀರು ಹರಿದು ಮೊದಲನೆಯ ಹಂತದ ಕೆರೆಗಳು ತುಂಬಿರುತ್ತವೆ. ಆದರೆ ಅದಕ್ಕೆ ಸಮರ್ಪಕವಾದ ರಾಜಕಾಲುವೆಗಳು ಮತ್ತು ಉಪಕಾಲುವೆಗಳ ಒತ್ತುವರಿ ತೆರೆವುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ವಿನಂತಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜು ಅವರೊಂದಿಗೆ ರೈತ ಸಂಘದ ಸದಸ್ಯರು ರೈತರ ಸಮಸ್ಯೆಗಳನ್ನು ಚರ್ಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಗಳ ಕುಂದು ಕೊರತೆ ಮತ್ತು ಪಹಣಿಯಲ್ಲಿ ಪಿ ನಂಬರ್ ತೆರವು ಮಾಡುವುದರ ಬಗ್ಗೆ ಮತ್ತು ಬಗರು ಹುಕುಂ ಸಾಗುವಳಿ ಕಮಿಟಿ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಗಮನಹರಿಸಬೇಕು. ಬಿತ್ತನೆ ಆಗುವ ಮುನ್ನವೇ ಸಂಬಂಧಪಟ್ಟ ಕೃಷಿ ಅಧಿಕಾರಿಗಳ ಜೊತೆ ಮಾತನಾಡಿ ರೈತರಿಗೆ ಸಮರ್ಪಕವಾಗಿ ರಾಸಾಯನಿಕ ಗೊಬ್ಬರಗಳು ದೊರಕುವಂತೆ ಜಿಲ್ಲಾಧಿಕಾರಿಗಳು ಹೆಚ್ಚಿನ ಒತ್ತು ಕೊಡಬೇಕೆಂದು ರೈತರ ಸಮಸ್ಯೆಗಳನ್ನು ವಿವರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎಚ್. ಪಿ. ರಾಮನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಜಿಲ್ಲಾ ಉಪಾಧ್ಯಕ್ಷ ವೀರಪುರ ಮುನಿನಂಜಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜನಪ್ಪ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ರಮಣ ರೆಡ್ಡಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಕುಪ್ಪಹಳ್ಳಿ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಸೋಮಶೇಖರ್, ಮಹೇಶ್ ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕು ಕಾರ್ಯದರ್ಶಿ ನೆಲಮಾಕಲ ಹಳ್ಳಿ ಗೋಪಾಲ್. ಉಪಾಧ್ಯಕ್ಷ ರಾಮಾಂಜಿನಪ್ಪ, ಕಾರ್ಯಾಧ್ಯಕ್ಷ ಜಾತವಾರ ಮುನಿರಾಜು, ಬಸವರಾಜು, ಕೆಂಪಣ್ಣ, ನಾರಾಯಣಸ್ವಾಮಿ, ನಾಗರಾಜು, ಮಂಜುನಾಥ್, ವೆಂಕಟರಮಣಪ್ಪ, ಮುದ್ದುಕೃಷ್ಣ, ಮುನಿಕೃಷ್ಣಪ್ಪ, ಅಶ್ವತಪ್ಪ ಹಾಜರಿದ್ದರು.