Home News Chikkaballapur ಹಣ ಕಬಳಿಕೆ : ಪೋಸ್ಟ್ ಮಾಸ್ಟರ್ ವಿರುದ್ಧ ಪ್ರತಿಭಟನೆ

ಹಣ ಕಬಳಿಕೆ : ಪೋಸ್ಟ್ ಮಾಸ್ಟರ್ ವಿರುದ್ಧ ಪ್ರತಿಭಟನೆ

0
Chikkaballapur Dibbur Post Master Money coruption

Chikkaballapur : ಪೋಸ್ಟ್ ಮಾಸ್ಟರ್ (Post Master) ವೈಷ್ಣವಿ ತಮ್ಮ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ (Money Corruption) ಎಂದು ಆರೋಪಿಸಿ ಸೋಮವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ದಿಬ್ಬೂರು (Dibbur) ಗ್ರಾಮದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಉಳಿತಾಯ ಖಾತೆ, ಗ್ರಾಮೀಣ ಅಂಚೆ ಜೀವ ವಿಮೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ವಿವಿಧ ಯೋಜನೆಗಳಿಗಾಗಿ ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದರು. ಈ ಖಾತೆಗೆ ಜಮೆ ಮಾಡಲು ಪೋಸ್ಟ್ ಮಾಸ್ಟರ್‌ಗೆ ಹಣ ನೀಡುತ್ತಿದ್ದರು. ಪಾಸ್‌ಪುಸ್ತಕದಲ್ಲಿ ಹಣ ಸ್ವೀಕರಿಸಿರುವುದಾಗಿ ಬಗ್ಗೆ ಬರೆದು ಕೊಟ್ಟಿದ್ದರೂ ಖಾತೆಯಲ್ಲಿ ಮಾತ್ರ ಹಣ ಇರಲಿಲ್ಲ.

ಇದರಿಂದ ಸಿಟ್ಟಿಗೆದ್ದ ಜನರು ಪೋಸ್ಟ್ ಮಾಸ್ಟರ್ ರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ವೈಷ್ಣವಿ ಅವರನ್ನು ವಿಚಾರಣೆಗೆ ಕರೆದೊಯ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version