Chintamani : ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿ (Chintamani) ತಾಲ್ಲೂಕಿನ ಸಂತೇಕಲ್ಲಹಳ್ಳಿ (Santekallahalli) ಮೂಲದ ಡಾ.ಆರ್.ಶೇಷಶಾಸ್ತ್ರಿ (Dr R Sheshashastri) ಅವರಿಗೆ ಹೈದರಾಬಾದಿನಲ್ಲಿ ಇಂದು (ಮೇ 28) ತೆಲಂಗಾಣದ ರಾಜ್ಯ ಸರ್ಕಾರದಿಂದ ಸುರವರಂ ಪ್ರತಾಪರೆಡ್ಡಿ ಪುರಸ್ಕಾರ (Suravaram Pratap Reddy Award) ನೀಡಿ ಗೌರವಿಸಲಾಗುತ್ತಿದೆ. ಸುರವರಂ ಪ್ರತಾಪರೆಡ್ಡಿ ಅವರ 126 ನೇ ಜಯಂತಿ ಮಹೋತ್ಸವದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಅವರು ಒಂದು ಲಕ್ಷ ರೂಪಾಯಿಗಳನ್ನು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಡಾ.ಆರ್.ಶೇಷಶಾಸ್ತ್ರಿ. “ಕರ್ನಾಟಕದ ವೀರಗಲ್ಲುಗಳು” ಎಂಬ ಇವರ ನಿಬಂಧ ಹಾಗೂ ಪುಸ್ತಕ ಇಂದಿಗೂ ಸಂಶೋಧಕರಿಗೆ ಆಕರ ಗ್ರಂಥವಾಗಿದೆ. ಹಲವಾರು ಮೌಲಿಕ ಕೃತಿಗಳನ್ನು ಇವರು ತೆಲುಗಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ತೆಲುಗಿಗೆ ಅನುವಾದಿಸಿದ್ದಾರೆ ಹಾಗೂ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.