Gudibande : ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಗ್ರಾಮ ವಿಕಾಸ ಸಂಸ್ಥೆ, ಜನ ಕಲ್ಯಾಣ ಟ್ರಸ್ಟ್, ಬೆಂಗಳೂರಿನ ಯೂತ್ ಪಾರ್ ಸೇವಾ ಮತ್ತು ವಿ.ಎಂ ವೇರ್ ವತಿಯಿಂದ ಆಹಾರ ಸಂಸ್ಕರಣಾ ಘಟಕವನ್ನು ಉದ್ಘಾಟನೇ ಮಾಡಲಾಯಿತ್ತು. ‘ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಜೀವನೋಪಾಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಹಿಳೆಯರ ಜೀವನೋಪಾಯಕ್ಕೆ ಸೋಮೇನಹಳ್ಳಿಯಲ್ಲಿ ಟೈಲರಿಂಗ್ ಹಾಗೂ ಆಹಾರ ಸಂಸ್ಕರಣಾ ಘಟಕ (Food Processing Unit) ಗಳನ್ನು ಸ್ಥಾಪನೆ ಮಾಡಲಾಗಿದೆ’ ಎಂದು ಯೂತ್ ಪಾರ್ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಷ ಕೇಶವ ತಿಳಿಸಿದರು.
ಸೋಮೇನಹಳ್ಳಿ ಗ್ರಾ.ಪಂ ಪಿಡಿಒ ಶ್ರೀನಿವಾಸ್, ಅಧ್ಯಕ್ಷೆ ಕೆ.ಎನ್. ಸರಳಾ, ಗ್ರಾ.ಪಂ ಉಪಾಧ್ಯಕ್ಷೆ ಸೈದಾಬೀ, ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್, ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯ ಸಿ.ಎಸ್.ಆರ್, ವ್ಯವಸ್ಥಾಪಕ ಮಂಜುನಾಥ, ರೋಹಿತ್, ನಿಖಿಲ್, ಸದಸ್ಯ ಕಿರಣ್, ವೆಂಕಟೇಶ್, ಅಂಜಮ್ಮ, ಚಂದ್ರಕಲಾ, ಸುಮಂಗಳಮ್ಮ, ಗಂಗಾಧರ, ಮುಖಂಡ ಅಶ್ವತ್ಥಪ್ಪ, ಈಶ್ವರಪ್ಪ, ನಾಗೇಂದ್ರ, ಗ್ರಾಮ ವಿಕಾಸ ಸಂಸ್ಥೆಯ ವಾಹಿನಿ ಸುರೇಶ್, ರಾಜಗೋಪಾಲ್, ರವಿಕುಮಾರ್ ಉಪಸ್ಥಿತರಿದ್ದರು.