Gauribidanur : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ವಿರೋಧಿಸಿ, ಹಿಂದೂ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶನಿ ಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ಪ್ರತಿಭಟನಾಕಾರರು ಬಜಾರ್ ರಸ್ತೆಯಿಂದ ಗಾಂಧಿ ವೃತ್ತಕ್ಕೆ ಮೆರವಣಿಗೆ ನಡೆಸಿದರು.
ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್. ಚಂದ್ರಶೇಖರ್ ಮಾತನಾಡಿ, “ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ನಾಳೆ ನಮ್ಮ ದೇಶದಲ್ಲಿಯೂ ನಡೆಯಬಹುದಾದ ಆತಂಕವಾಗಿದೆ. ಹಮಾಸ್ ದಾಳಿಯ ಸಮಯದಲ್ಲಿ ಭಾರತದಲ್ಲಿ ಪ್ರಚೋದನಾತ್ಮಕ ಪ್ರತಿಭಟನೆಗಳು ನಡೆದವು. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೂ ದೇಶದಲ್ಲಿ ಯಾರೂ ಧ್ವನಿ ಎತ್ತುತ್ತಿಲ್ಲ. ಇದು ವಿಷಾದನೀಯ,” ಎಂದು ಕಳವಳ ವ್ಯಕ್ತಪಡಿಸಿದರು.
ದೌರ್ಜನ್ಯ ಖಂಡಿಸಿ, ತಹಶೀಲ್ದಾರ್ ಮಹೇಶ್ ಪತ್ರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರವಿನಾರಾಯಣ ರೆಡ್ಡಿ, ಸಿ.ಆರ್. ನರಸಿಂಹ ಮೂರ್ತಿ, ವೆಂಕಟರೆಡ್ಡಿ, ಡಾ. ಶಶಿಧರ್, ಮಾರ್ಕೆಟ್ ಮೋಹನ್, ರಮೇಶ್ ರಾವ್ ಶೆಲ್ಕೆ, ಇಸ್ತುರಿ ಸಂಪಂಗಿ, ಹನುಮೇಗೌಡ, ಭವ್ಯ ರಂಗನಾಥ್, ಸಾಗನಹಳ್ಳಿ ಶಿವಕುಮಾರ್, ರಮೇಶ್ ಬಾಬು, ಕೋಟೆ ಭಾಸ್ಕರ್, ರಾಮಣ್ಣ, ಮುನ್ನಿ ಲಕ್ಷ್ಮಮ್ಮ, ಬೈಪಾಸ್ ರವಿ, ಸ್ವಾಗತ್, ಚಂದ್ರು, ಮಹೇಂದ್ರ, ಮತ್ತು ಗಂಗಾ ಲಕ್ಷ್ಮಮ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು.