Tuesday, March 28, 2023
HomeGauribidanurDCC Bank ನ ನೂತನ ಕಟ್ಟಡ ಉದ್ಘಾಟನೆ

DCC Bank ನ ನೂತನ ಕಟ್ಟಡ ಉದ್ಘಾಟನೆ

- Advertisement -
- Advertisement -
- Advertisement -
- Advertisement -

Gauribidanur : ಗೌರಿಬಿದನೂರಿನಲ್ಲಿ DCC Bank ನ ನೂತನ ಕಟ್ಟಡವನ್ನು ವಿಧಾನಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್ (M.L. Anil Kumar), ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಮರಳೂರು ಹನುಮಂತರೆಡ್ಡಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಎಲ್.ಅನಿಲ್ ಕುಮಾರ್ ” ಡಿಸಿಸಿ ಬ್ಯಾಂಕಿನ ಸಂಸ್ಥಾಪಕ ಎನ್.ಸಿ.ನಾಗಯ್ಯರೆಡ್ಡಿ ನೆನಪಿನಲ್ಲಿ ಅವರ ಸ್ಥಳೀಯ ತಾಲ್ಲೂಕಿನಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿರುವುದು ಸಂತಸದ ವಿಚಾರ. ವಾರ್ಷಿಕವಾಗಿ ₹1200 ಕೋಟಿಗೂ ಅಧಿಕ ವಹಿವಾಟು ಹೊಂದುವ ಮೂಲಕ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಆಸರೆಯಾಗಿ ಸಹಕಾರ ಕ್ಷೇತ್ರ ಅವಿಭಜಿತ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ಅವನತಿ ಅಂಚಿನಲ್ಲಿದ್ದ ಸಹಕಾರ ಸಂಸ್ಥೆಗೆ ಮರುಜೀವ ನೀಡಿ ಆರ್ಥಿಕ ವಹಿವಾಟಿಗೆ ಕಾರಣವಾಗಿರುವ ಸ್ಥಳೀಯ ನಾಯಕರು ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಇದರಿಂದ ಗ್ರಾಮೀಣ ಭಾಗದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳ ಮುಖೇನ ಡಿಸಿಸಿ ಬ್ಯಾಂಕ್ ಮಹಿಳಾ ಸಂಘಗಳಿಗೆ ಬಡ್ಡಿರಹಿತವಾದ ಸಾಲ ನೀಡುವ ಮೂಲಕ ಸಾಕಷ್ಟು ಕುಟುಂಬಗಳ ನಿರ್ವಹಣೆಗೆ ವರದಾನವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾದ ಟಿ.ಎ.ನಾಗರಾಜು, ಸಹಕಾರ‌ ಸಂಘದ ನಿವೃತ್ತ ಜಂಟಿ ನಿರ್ಬಂಧಕರಾದ ಎಂ.ಡಿ.ನರಸಿಂಹಮೂರ್ತಿ, ಡಿಸಿಸಿ‌ ಬ್ಯಾಂಕಿನ ನಿರ್ದೇಶಕರಾದ ಮರಳೂರು ‌ಹನುಮಂತರೆಡ್ಡಿ, ಸೋಮಣ್ಣ, ನೀಲಕಂಠೇಗೌಡ, ವೆಂಕಟಶಿವಾರೆಡ್ಡಿ, ಗೋವಿಂದರಾಜು, ಸುದರ್ಶನ, ಸುಧಾಕರ್, ವೇದ, ದಯಾನಂದ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ಶಿವಕುಮಾರ್, ವ್ಯವಸ್ಥಾಪಕರಾದ ಮಹಮದ್ ಅಸ್ಲಾಂ, ಮೇಲ್ವಿಚಾರಕರಾದ ಚಂದ್ರಶೇಖರ್, ಮುಖಂಡರಾದ ಬಿ.ಪಿ.ಅಶ್ವತ್ಥನಾರಾಯಣಗೌಡ, ಎಚ್.ಎನ್‌.ಪ್ರಕಾಶರೆಡ್ಡಿ, ಸಿ.ಆರ್.ನರಸಿಂಹಮೂರ್ತಿ, ಕೆ.ಎಚ್.ಪದ್ಮರಾಜ್ ಜೈನ್, ಬೊಮ್ಮಣ್ಣ, ಎ.ಅರುಂಧತಿ, ಪಿ.ಎನ್.ಪ್ರಕಾಶ್ ಉಪಸ್ಥಿತರಿದ್ದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!