Gauribidanur : ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿ DCC Bank ಹಾಗೂ ಸ್ಥಳೀಯ VSSN ವತಿಯಿಂದ ಆಯೋಜಿಸಿದ್ದ ಸಾಲದ ATM ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಉದ್ಘಾಟಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಸ್ಥಳೀಯ ವಿಎಸ್‌ಎಸ್‌ಎನ್‌ಗಳ ಮೂಲಕ ಪ್ರತಿ ಹಳ್ಳಿಯಲ್ಲಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಸೌಲಭ್ಯವು ಅವರ ಬದುಕಿಗೆ ಆಸರೆಯಾಗಿದೆ. ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಿ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಕೋಲಾರ– ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬಡ್ಡಿ ರಹಿತವಾಗಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಾಲ ನೀಡುತ್ತಿದ್ದು ಮಹಿಳೆಯರು ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕಾಗಿದೆ” ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ವಿಎಸ್‌ಎಸ್‌ಎನ್ ಕಾರ್ಯದರ್ಶಿ ಸಿ. ನಾಗರಾಜಯ್ಯ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಚ್.ವಿ. ನಾಗರಾಜ್, ವ್ಯವಸ್ಥಾಪಕರಾದ ಮಹಮದ್ ಅಸ್ಲಾಂ, ಮೇಲ್ವಿಚಾರಕರಾದ ಚಂದ್ರಶೇಖರ್, ವಾಟದಹೊಸಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷರಾದ ಕೆಂಪರಂಗಪ್ಪ, ಉಪಾಧ್ಯಕ್ಷರಾದ ಅನಸೂಯಮ್ಮ, ಕಾರ್ಯದರ್ಶಿ ಸಿ. ನಾಗರಾಜಯ್ಯ, ಮುಖಂಡರಾದ ಕೆ.ಎನ್. ಕೇಶವರೆಡ್ಡಿ, ನವೀನ್ ಕುಮಾರ್, ಅಮರನಾರಾಯಣರೆಡ್ಡಿ, ವಿ.ಪಿ. ನಾರಾಯಣಗೌಡ, ಶಿವಶಂಕರರೆಡ್ಡಿ, ಅಶ್ವತ್ಥರೆಡ್ಡಿ, ಮಾಳಪ್ಪ, ಮುಸ್ತಾಪ್ ಸಾಬಿ, ಗಂಗಾಧರಪ್ಪ, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಡಿಸಿಸಿ ಬ್ಯಾಂಕ್ ಮತ್ತು ವಿಎಸ್‌ಎಸ್‌ಎನ್ ಸಿಬ್ಬಂದಿ ಪಾಲ್ಗೊಂಡಿದ್ದರು.