Home Gauribidanur ಸಾಲ ಮರುಪಾತಿಸುವುದಿಲ್ಲವೆಂದು ಡಿಸಿಸಿ ಬ್ಯಾಂಕ್‌ಗೆ ಮಹಿಳೆಯರ ಮುತ್ತಿಗೆ

ಸಾಲ ಮರುಪಾತಿಸುವುದಿಲ್ಲವೆಂದು ಡಿಸಿಸಿ ಬ್ಯಾಂಕ್‌ಗೆ ಮಹಿಳೆಯರ ಮುತ್ತಿಗೆ

1
Gauribidanur Stri shakthi sangha Women Protest DCC Bank

Gauribidanur: ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದಿರುವ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಗೌರಿಬಿದನೂರು ನಗರದ ಡಿಸಿಸಿ ಬ್ಯಾಂಕ್‌ನಲ್ಲಿ (DCC Bank) ಬುಧವಾರ ಪ್ರತಿಭಟನೆ (protest) ನಡೆಸಿ, ಸಾಲ ಮರುಪಾವತಿಗೆ ನಿರಾಕರಿಸಿದರು.

ತಾಲೂಕಿನಲ್ಲಿ 35 ವಿಎಸ್ ಎಸ್ ಎನ್ ಮೂಲಕ ಡಿಸಿಸಿ ಬ್ಯಾಂಕ್ ನಿಂದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಅಂದಾಜು 2,500 ಸದಸ್ಯರು ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಆದರೆ, ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಸಂಘಗಳ ಮೂಲಕ ಮಹಿಳೆಯರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಪಣ ತೊಟ್ಟಿದ್ದರು.

ಡಿಸಿಸಿ ಬ್ಯಾಂಕ್‌ನಲ್ಲಿ ಪಡೆದಿರುವ ಸಾಲವನ್ನು ಮರುಪಾವತಿಸುವುದಿಲ್ಲ ಮತ್ತು ವಾರದ ಮತ್ತು ಮಾಸಿಕ ಕಂತುಗಳನ್ನು ಕಟ್ಟುವುದನ್ನು ನಿಲ್ಲಿಸುತ್ತೇವೆ ಎಂದು ಮಹಿಳೆಯರು ಬ್ಯಾಂಕ್ ನಿರ್ದೇಶಕ ಮಾಲೂರು ಹನುಮಂತರೆಡ್ಡಿ ಅವರಿಗೆ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಈಡೇರಿಸುತ್ತಾರೆ ಎಂಬ ನಂಬಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇವೆ. ಆದರೆ ಈಗ ಸ್ಥಳೀಯ ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳು ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸರಕಾರ ತನ್ನ ಬದ್ಧತೆಯನ್ನು ಗೌರವಿಸಿ ತಮ್ಮ ಸಾಲವನ್ನು ಮನ್ನಾ ಮಾಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.

ಬ್ಯಾಂಕ್‌ನ ವ್ಯವಸ್ಥಾಪಕರು ಮತ್ತು ನಿರ್ದೇಶಕರು ಮತ್ತು ಸಾಲ ಪಡೆದ ಮಹಿಳೆಯರ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆಯಿತು.

For Daily Updates WhatsApp ‘HI’ to 7406303366

1 COMMENT

  1. ಸಿದ್ದರಾಮಯ್ಯ ನ ಕೇಳಿ ಅಂತ ಹೇಳ್ಬೇಕು , ಬ್ಯಾಂಕ್ ಅವ್ರು

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version