Gauribidanur : ಗೌರಿಬಿದನೂರು ನಗರದ ಎಇಎಸ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ 110ನೇ ಸಂಸ್ಶಾಪನಾ ದಿನಾಚರಣೆ (KaSaPa Foundation Day) ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಇಎಸ್ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಯ್ಯ “ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿಯ ಸಂವರ್ಧನೆ ಹಾಗೂ ರಕ್ಷಣೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಪರಿಶ್ರಮದಿಂದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿತು. ಇದರ ಪರಿಣಾಮವಾಗಿ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಅನೇಕ ಮಂದಿಯಿಂದ ಕನ್ನಡ ಬೆಳವಣೆಗೆಗೆ ಸಹಕಾರಿಯಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಮದ್ದಿಲೇಟಿ, ಪರಿಷತ್ತಿನ ಆಜೀವ ಸದಸ್ಯರಾದ ಶ್ರೀನಾಥರೆಡ್ಡಿ, ಪುಲಗೂರು ನಂಜುಂಡಪ್ಪ, ನಂಜಪ್ಪ, ಈಶ್ವರರೆಡ್ಡಿ, ಆದಿ ನಾರಾಯಣಪ್ಪ, ಲಕ್ಷ್ಮಿ ನಾರಾಯಣಪ್ಪ, ನರಸಿಂಹಯ್ಯ ಮತ್ತಿತರರು ಪಾಲ್ಗೊಂಡಿದ್ದರು.