Bangarpete : ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಸಾಕರಸನಹಳ್ಳಿ ಕಾಡಾನೆ ದಾಳಿ (Elephant Attack) ನಡೆಸಿ ಬೆಳೆ ನಾಶ (Crop Destroy) ಪಡಿಸಿದೆ.
ಭಾನುವಾರ ರಾತ್ರಿ ಸಾಕರಸನಹಳ್ಳಿಯ ಮುನಿಸ್ವಾಮಪ್ಪ ಎಂಬುವರ ಹೊಲದಲ್ಲಿ ಬೆಳೆದಿದ್ದ ಬಾಳೆ ಗಿಡಗಳನ್ನು ಕಾಡಾನೆ ನಾಶಪಡಿಸಿದ್ದು ಜತೆಗೆ ಸೀತ ಭೈರಪ್ಪನವರ ತೆಂಗಿನ ಗಡಿ ಹಾಗೂ ಮುರಳಿ, ರಾಜಪ್ಪ ಅವರ ಹುಲ್ಲು ಬೆಳೆಯನ್ನೂ ನಾಶಪಡಿಸಿದೆ. ಇದರಿಂದ ಬರಗಾಲದಲ್ಲಿ ಬೆಳೆದಿದ್ದ ಬೆಳೆ ಫಸಲು ಬರುವ ಮುನ್ನಾವೇ ನಾಶವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ನಿತ್ಯ ರಾತ್ರಿ ಗಸ್ತು ತಿರುಗಿ ಆನೆಗಳನ್ನು ತಮಿಳುನಾಡು ಅಥವಾ ಆಂಧ್ರಪ್ರದೇಶದ ಕಡೆ ಓಡಿಸಲು ಮುಂದಾಗಿದ್ದಾರೆ.