Gauribidanur : ಗೌರಿಬಿದನೂರು ಪ್ರಜಾಸೌಧದಲ್ಲಿ ಬುಧವಾರ ಲೋಕಾಯುಕ್ತ (Lokayukta) ಸಭೆ (public grievance meeting) ನಡೆಯಿತು. ವಿವಿಧ ಗ್ರಾಮಗಳಿಂದ ಬಂದ ಜನರು ಕಾಮಗಾರಿ ವಿಳಂಬ, ಕುಡಿಯುವ ನೀರಿನ ಕೊರತೆ, ಶೌಚಾಲಯದ ಸಮಸ್ಯೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಅನೇಕ ದೂರುಗಳನ್ನು ನೀಡಿದರು.
ಈ ಸಂದರ್ಭದಲ್ಲಿ ರೈತ ಆತ್ಮಹತ್ಯೆಯ ಪ್ರಕರಣದಲ್ಲಿ ಪರಿಹಾರ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಪ್ರಚಾರ ಮಾಡಲು ಕೃಷಿ ಸಹಾಯಕ ನಿರ್ದೇಶಕರಿಗೆ ಆದೇಶ ನೀಡಿದ ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಶೌಚಾಲಯ ಸಮಸ್ಯೆ ಬಗೆಹರಿಸಲು, ಹಳ್ಳಿಗಳಲ್ಲಿ ನೀರಿನ ಸಮಸ್ಯೆ, ಅಕ್ರಮ ಮದ್ಯ ಮಾರಾಟ, ತಪ್ಪು ಸರ್ವೆಯಿಂದ ರೈತರಿಗೆ ತೊಂದರೆ ಅಟಲ್ ಭೂ ಜಲ ಯೋಜನೆಯಲ್ಲಿನ ಅವ್ಯವಹಾರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ತಕ್ಷಣದ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಎಸ್.ಪಿ ಅಂಟೋನಿ ಜಾನ್, ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್, ಪೌರಾಯುಕ್ತೆ ಗೀತಾ, ಬಿಇಒ ಶ್ರೀನಿವಾಸ್ ಮೂರ್ತಿ, ಗ್ರೇಡ್ 2 ತಹಶೀಲ್ದಾರ್ ಆಶಾ ಹಾಗೂ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.