Home News Gauribidanur ಬ್ರಹ್ಮಶ್ರೀ ನಾರಾಯಣ ಗುರು 169ನೇ ಜಯಂತಿ

ಬ್ರಹ್ಮಶ್ರೀ ನಾರಾಯಣ ಗುರು 169ನೇ ಜಯಂತಿ

0
Gauribidanur Narayana Guru Anniversary

Gauribidanur : ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘ ವತಿದಿಂದ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು (Brahmasri Narayana Guru) 169ನೇ ಜಯಂತಿ (169 Birth Anniversary) ಮತ್ತು ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ “ದಶಕಗಳಿಂದಲೂ ಕುಲಕಸುಗಳನ್ನೇ ನಂಬಿ ಬದುಕುತ್ತಿರುವ ಆರ್ಯ ಈಡಿಗ ಸಮಾಜದವರು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಿ ನಾರಾಯಣ ಗುರು ತತ್ವ ಮತ್ತು ಆದರ್ಶಗಳನ್ನು ಪರಿಪಾಲಿಸುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಸಮುದಾಯದ ಏಳಿಗೆಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಸದಾ ಬದ್ಧನಾಗಿರುತ್ತೇನೆ” ಎಂದು ಹೇಳಿದರು..

ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಸಂಘದ ಗೌರವಾಧ್ಯಕ್ಷ ಜಿ.ಎನ್.ನಾಗರಾಜ್, ಅಧ್ಯಕ್ಷ ವಿಜಯ್ ರಾಖಲ್ ಚಂದ್, ಪ್ರಸಾದ್, ಜಿ.ಎನ್.ಸೂರಜ್, ಬಿ.ಎಸ್.ರಾಜಶೇಖರ್, ಕೃಷ್ಣಮೂರ್ತಿ, ವೆಂಕಟರವಣಪ್ಪ, ಇ.ಮಂಜುನಾಥ್, ನಾಗರಾಜ್, ಶಂಕರಪ್ಪ, ನರೇಂದ್ರಪ್ಪ, ಲಕ್ಷ್ಮಿನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version