Gauribidanur : ಗೌರಿಬಿದನೂರಿನ ತಾಲ್ಲೂಕಿನ ತಾರಿದಾಳು ಗ್ರಾಮದಲ್ಲಿ ವಾಲ್ಮೀಕಿ ಜಾತ್ರೆ (Valmiki Jatre) ಅಂಗವಾಗಿ ಸಮುದಾಯದ ಮುಖಂಡರ ಸಮಾಲೋಚನಾ ಸಭೆ (Consultation Meeting) ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡ ಆರ್.ಅಶೋಕ್ ಕುಮಾರ್ “ಜಾತ್ರೆ ಎಂಬುದು ಧಾರ್ಮಿಕ ಪ್ರಕ್ರಿಯೆಯಾಗಿದ್ದರೂ ನಾಡಿನಲ್ಲಿರುವ ವಾಲ್ಮೀಕಿ ಸಮುದಾಯ ಸಂಘಟಿಸುವುದೇ ಮಹರ್ಷಿ ವಾಲ್ಮೀಕಿ ಜಾತ್ರೆ ಉದ್ದೇಶವಾಗಿದೆ. ಈ ಬಾರಿ ಜಾತ್ರಾ ಮಹೋತ್ಸವ ಫೆ.8 ಮತ್ತು 9ರಂದು ಗುರುಪೀಠದಲ್ಲಿ ಸಂಭ್ರಮದಿಂದ ನಡೆಯಲಿದೆ. ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಬಾಬಣ್ಣ, ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ನಾರಾಯಣ ಸ್ವಾಮಿ, ಸಿಟಿಒ ನಾಗರಾಜಪ್ಪ, ಕಸಬಾ ಹೋಬಳಿ ಅಧ್ಯಕ್ಷ ಅಶ್ವತ್ಥಪ್ಪ, ತೊಂಡೇಬಾವಿ ಹೋಬಳಿ ಅಧ್ಯಕ್ಷ ಯತೀಶ್ ನಾಯಕ, ಗಂಗಯ್ಯ, ಎಸ್‌ವಿಟಿ ಲೋಕೇಶ್, ನಿರಂಜನ್, ಮದವನಹಳ್ಳಿ ಸೋಮು, ರಾಘವ್, ಮದನ್, ನಾಗರಾಜು, ರಾಘು, ಜೀಲಾಕುಂಟೆ ಅನಿಲ್, ಶಿಕ್ಷಕರಾದ ಸಿದ್ದರಾಮಯ್ಯ, ಕದಿರಪ್ಪ, ಗಂಗಪ್ಪ, ಡಿ ಪಾಳ್ಯ ಶರತ್ ಮತ್ತಿತರರು ಪಾಲ್ಗೊಂಡಿದ್ದರು.