Chintamani : ಶನಿವಾರ ಚಿಂತಾಮಣಿಯ ಕನಂಪಲ್ಲಿಯ ಓಟಿಕೆರೆ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಸಚಿವ ಡಾ.ಎಂ.ಸಿ.ಸುಧಾಕರ್ (Dr. MC Sudhakar) ಚಾಲನೆ (Initiated work of the project) ನೀಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಸಚಿವರು “ಚಿಂತಾಮಣಿ-ಹೊಸಕೋಟೆಯ ಕೆ.ಶಿಪ್ ರಸ್ತೆಯ ನಿರ್ಮಾಣ ಸಮಯದಲ್ಲೇ ಕೆರೆಯ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು. ₹50 ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಲಾಗಿತ್ತು. ಪಕ್ಕದಲ್ಲಿರುವ ಯಾದವ ವಿದ್ಯಾರ್ಥಿನಿಲಯವಿರುವ ಸ್ಥಳವೂ ಕೋಡಿಯ ಭಾಗವಾಗಿತ್ತು. ಯಾದವ ವಿದ್ಯಾರ್ಥಿನಿಲಯಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಕೆರೆಯ ಕೋಡಿಯನ್ನು ಹೊಸದಾಗಿ ರೂಪಿಸಲಾಗಿತ್ತು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಮುಖಂಡ ಮೀಸೆವೆಂಕಟರೆಡ್ಡಿ, ಮುಖಂಡರು ಭಾಗವಹಿಸಿದ್ದರು.