ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ತಾಲ್ಲೂಕಿನ ಜ್ಞಾನ ಜ್ಯೋತಿ ಶಾಲಾ ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
1500 ಮೀಟರ್ ಓಟದಲ್ಲಿ ಅರ್ಚಿತ (ಪ್ರಥಮ), ನಡಿಗೆ ಓಟದಲ್ಲಿ ಅಪೇಕ್ಷಾ(ಪ್ರಥಮ), ಗುಂಡು ಎಸೆತದಲ್ಲಿ ಕೌಶಿಕ್(ದ್ವಿತೀಯ), 400 ಮೀಟರ್ ಓಟದಲ್ಲಿ ದೃವ(ದ್ವಿತೀಯ), 200 ಮೀಟರ್ ಓಟದಲ್ಲಿ ರಕ್ಷಿತ (ಪ್ರಥಮ ಸ್ಥಾನ), 400 ಮೀಟರ್ ಓಟದಲ್ಲಿ ಆರ್ಯ(ಪ್ರಥಮ), 400 ಮೀಟರ್ ಓಟದಲ್ಲಿ ಭುವನ್ ಯಾದವ್(ದ್ವಿತೀಯ).
ಹಾಗೆಯೆ 400*100 ರಿಲೆಯಲ್ಲಿ ಅಕ್ಷಯ್, ಕೃಷ್ಣ ತೇಜ್, ಭುವನ್ ಗೌಡ ಹಾಗೂ ತರುಣ್ ತೇಜ್ ತಂಡ ಪ್ರಥಮ ಸ್ಥಾನ ಪಡೆದು ಮೇಲಿನ ಎಲ್ಲರೂ ರಾಜ್ಯ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನು 800 ಮೀಟರ್ ಓಟದ ಸ್ಪರ್ಧೆಯಲ್ಲಿ ದಿಶಾಂತ್ ತೃತೀಯ ಮತ್ತು ನಡಿಗೆ ಓಟದಲ್ಲಿ ಚಂದ್ರು ತೃತೀಯ ಸ್ಥಾನ ಪಡೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಾಗೂ ಅವರನ್ನು ತರಬೇತು ಗೊಳಿಸಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎಂ.ರಾಜೀವ್ ಕುಮಾರ್, ಪ್ರಾಂಶುಪಾಲೆ ಮನುಶ್ರೀ ಅಭಿನಂದಿಸಿದ್ದಾರೆ.