Chikkaballapur :
ಕೋಲಾರದಲ್ಲಿ ನಡೆದ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಚಿಂತಾಮಣಿ ನಗರದ ವಿನೋಬಾ ಕಾಲೋನಿಯ ಕೆ.ಎಲ್.ಲಕ್ಷ್ಮೀನಾರಾಯಣ್, ಭಾಗ್ಯಮ್ಮ ದಂಪತಿ ಪುತ್ರಿ ಹಾಗೂ ತರಣ್ ತೇಜ್ ಅವರ ಪತ್ನಿ ಎಲ್.ಮಂಜುಳಾ ಇತಿಹಾಸ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಹಾಗೂ ಶಿಡ್ಲಘಟ್ಟ ನಗರದ ಶಂಕರಮಠ ಬೀದಿಯ ಸಿ.ಎಸ್.ಸುದರ್ಶನ್ ಮತ್ತು ಎಸ್.ಮಂಜುಳಾ ದಂಪತಿ ಮಗಳು ಎಸ್. ನಯನಶ್ರೀ ಅವರು ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಚಿನ್ನದ ಪದಕವನ್ನು ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರಿಂದ ಸ್ವೀಕರಿಸಿದರು.