Home News ಗುಡಿಬಂಡೆ: 18 ರಿಂದ 44 ವರ್ಷದವರಿಗೆ ಲಸಿಕೆ ಪುನರಾರಂಭ

ಗುಡಿಬಂಡೆ: 18 ರಿಂದ 44 ವರ್ಷದವರಿಗೆ ಲಸಿಕೆ ಪುನರಾರಂಭ

0

ಕೊರೊನಾ 2ನೇ ಅಲೆ ವೇಗವಾಗಿ ಹರಡುತ್ತಿರುವುದುರಿಂದ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ 18 ರಿಂದ 44 ವರ್ಷ ಒಳಗಿನವರಿಗೆ ಮೇ 24 ರಿಂದ ಕೋವಿಡ್ ಲಸಿಕೆಯನ್ನು ಮತ್ತೆ ಹಾಕಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ರಾಜಶೇಖರ್ ತಿಳಿಸಿದ್ದಾರೆ.

ಗುಡಿಬಂಡೆ ಪಟ್ಟಣದ 7 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು,
ಮೇ 24 ರಂದು 1ನೇ ಇಂದಿರಾ ನಗರದ ಅಂಗನವಾಡಿ ಕೇಂದ್ರ
25ರಂದು 2ನೇ ವಾರ್ಡ್‌ ಸೊಪ್ಪಿನ ಪೇಟೆ ಅಂಗನವಾಡಿ ಕೇಂದ್ರ
26ರಂದು 3ನೇ ವಾರ್ಡ್‌ ಪಟ್ಟಣ ಪಂಚಾಯಿತಿ ಕಾರ್ಯಾಲಯ
27ರಂದು 4,5,6ನೇ ವಾರ್ಡ್‌ ಕಿರಿಯ ಪ್ರಾಥಮಿಕ ಶಾಲೆ, ಅಂಬೇಡ್ಕರ ನಗರ,
28ರಂದು 7,8ನೇ ವಾರ್ಡ್‌ ಉರ್ದು ಶಾಲೆ,
29ರಂದು 9, 10ನೇ ವಾರ್ಡ್‌ ಅಂಗನವಾಡಿ ಕೇಂದ್ರ ಬಾಪೂಜಿ ನಗರ,
30ರಂದು 11ನೇ ವಾರ್ಡ್‌ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಲಸಿಕೆ ಹಾಕಲಾಗುತ್ತದೆ ಎಂದು ಅವರು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version