Gudibande : ಗುಡಿಬಂಡೆ ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಅಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ಹಾಗೂ ಮತದಾರರ ದಿನಾಚರಣೆ (National Voters Day) ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ಆರ್. ಶಿವಕುಮಾರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಸಿವಿಲ್ ನ್ಯಾಯಾಧೀಶ ಆರ್. ಶಿವಕುಮಾರ ” ಉತ್ತಮ ಶಿಕ್ಶಣದಿಂದ ಮಹಿಳೆಯರು ಸಹ ಪುರಷರಂತೆ ಎಲ್ಲಾ ರಂಗಗಳಲ್ಲಿ ಬೆಳೆಯಲು ಸಹಕಾರಿಯಾಗಲಿದ್ದು ಸಂಸಾರದ ಪೋಷಣೆಯ ಜತೆಗೆ ಆಡಳಿತ ಹಾಗೂ ರಾಜಕೀಯ ರಂಗದಲ್ಲೂ ಸಮಾನತೆ ಬರಲಿದೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದ್ದು ಎಲ್ಲರ ಸಹಕಾರ ಅಗತ್ಯವಿದೆ ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲ ಎ. ರಾಮನಾಥರೆಡ್ಡಿ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಎಂ. ಅನಿಲ್ ಕುಮಾರ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಫೀಕ್, ವಕೀಲರ ಸಂಘದ ಅಧ್ಯಕ್ಷ ಪಿ. ಶಿವಪ್ಪ, ಸರ್ಕಾರಿ ಅಭಿಯೋಜಕ ವಿ. ರಾಮಮೂರ್ತಿ, ವಕೀಲರಾದ ನಾರಾಯಣಸ್ವಾಮಿ, ಮಹೇಶ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur