Gudibande Youth Death By Drowning
Gudibande : ನದಿ ಕಾಲುವೆಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಳ್ಳಿ ನಡೆದಿದೆ. ತಾಲ್ಲೂಕಿನ ಹಂಪಸಂದ್ರ ಗ್ರಾಮದ ಆಟೋ ಚಾಲಕ ಸಂತೋಷ್ (24) ಸಂಜೆ ಸುಮಾರು 5 ಗಂಟೆಗೆ ಇಬ್ಬರು ಸ್ನೇಹಿತರ ಜೊತೆಗೆ ಕುಶಾವತಿ ಕಾಲುವೆಯಲ್ಲಿ ಈಜಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ನೇಹಿತರ ಜೊತೆ ಸವಾಲು ಹಾಕಿಕೊಂಡು ಸಂತೋಷ್ ಮತ್ತು ಸ್ನೇಹಿತರಾದ ವಿಜಯ್ ಹಾಗೂ ಪವನ್ ಈಜಲು ಹೋಗಿದ್ದರು ಎನ್ನಲಾಗಿದೆ. ವಿಜಯ್ ಮತ್ತು ಪವನ್ ದಡಕ್ಕೆ ವಾಪಸಾಗಿದ್ದು, ಸಂತೋಷ್ ಬಂದಿರಡಿದ್ದನ್ನು ಗಮನಿಸಿ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸಂತೋಷ್ ನ ದೇಹಕ್ಕಾಗಿ ರಾತ್ರಿಯವರೆಗೆ ಶೋಧ ಕಾರ್ಯವನ್ನು ನಡೆಸಿ ಕಾರ್ಯಾಚರಣೆಯನ್ನು ಮುಂಜಾನೆ ಮುಂದುವರೆಸುವುದಾಗಿ ತಿಳಿಸಿದರು. ಘಟನಾ ಸ್ಥಳಕ್ಕೆ ಸಿಗ್ಬತುಲ್ಲಾ, ಪೊಲೀಸ್ ವೃತ್ತ ನಿರೀಕ್ಷಕ ಲಿಂಗರಾಜು, ರಾಜಸ್ವ ನಿರೀಕ್ಷಕ ಅಮರನಾರಾಯಣ, ಗ್ರಾ ಪಂ ಸದಸ್ಯರು ಭೇಟಿ ನೀಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur