Gudibande : ಗುಡಿಬಂಡೆ ಪಟ್ಟಣದ ಪ್ರಸಿದ್ಧ ಜಾಲಾರಿ ಸಪ್ಪಲಮ್ಮ (Jaalari Sappalamma ) ದೇವಾಲಯದಲ್ಲಿ 27ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ಕರಗ ಮಹೋತ್ಸವವನ್ನು (Karaga Mahotsava) ಭಕ್ತಿಭಾವದಿಂದ ಆಚರಿಸಲಾಯಿತು.
ಮೂರು ದಿನಗಳ ಜಾತ್ರಾ ಕಾರ್ಯಕ್ರಮ ಮಂಗಳವಾರ ಹಸಿಕರಗ ಮತ್ತು ತಂಬಿಟ್ಟು ದೀಪೋತ್ಸವದಿಂದ ಆರಂಭವಾಗಿ, ಬುಧವಾರ ಹೂವಿನ ಕರಗ, ಗುರುವಾರ ಬೆಳಿಗ್ಗೆ ಒನಕೆ ಕರಗದೊಂದಿಗೆ ಅಂತ್ಯಗೊಂಡಿತು. ನಾಗಿಣಿ ನೃತ್ಯ, ಗಾರುಡಿ ಗೊಂಬೆ, ಕೀಲುಕುದುರೆ ನೃತ್ಯಗಳು ನೋಡುಗರ ಮನಸೆಳೆಯಿತು.
ಜಾತ್ರೆಯ ವಿಶೇಷತೆಯಾಗಿ ದೇವಿಗೆ ಹೂವಿನ ಅಲಂಕಾರ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು.