Gudibande : ಕರ್ನಾಟಕದಲ್ಲಿ MES ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಡಿಸೆಂಬರ್ 31ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ಪೂರ್ವಭಾವಿ ಸಭೆಯಲ್ಲಿ ಗುಡಿಬಂಡೆ ತಾಲ್ಲೂಕಿನ ಕನ್ನಡಪರ ಸಂಘಟನೆ ಹಾಗೂ ರೈತ ಸಂಘಟನೆಗಳ ಮುಖಂಡರು ನಿರ್ಧರಿಸಿದರು.
ಎಂಇಎಸ್ ಪುಂಡರು ಕನ್ನಡವನ್ನು ಅವಮಾನಿಸುವ ಕೆಲಸ ಮಾಡಿಕೊಂಡು ಬಂದಿರುವುದಲ್ಲದೆ ಕನ್ನಡ ಧ್ವಜ ಸುಡುವುದು, ಕನ್ನಡ ನಾಮಫಲಕಗಳಿಗೆ ಮಸಿ ಬಳಿಯುವುದು ಸೇರಿದಂತೆ ಅನೇಕ ರೀತಿಯಲ್ಲಿ ದಾಂದಲೆ ನಡೆಸುತ್ತಿದ್ದಾರೆ. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಡಿ.31ರಂದು ಬಂದ್‌ಗೆ ಕರೆ ನೀಡಿದ್ದು, ಆ ದಿನದಂದು ಗುಡಿಬಂಡೆಯಲ್ಲಿ ಶಾಂತಿಯುತಗವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಕರುನಾಡು ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಫಯಾಜ್ ಅಹಮದ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ರಾಮನಾಥ್ , ಉರ್ದು ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್, ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಅಂಬರೀಶ್, ಸಾಹಿತಿ ಸುಬ್ಬರಾಯಪ್ಪ, ರೈತ ಮುಖಂಡ ವೆಂಕಟರೋಣಪ್ಪ, ವರದರಾಜು, ಕರುನಾಡು ಸಾಹಿತ್ಯ ಪರಿಷತ್‌ನ ಶ್ರೀನಿವಾಸ್, ಶ್ರೀನಿವಾಸ್ ನಾಯಕ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur