Gudibande : ಗುಡಿಬಂಡೆ ತಾಲ್ಲೂಕು ಕಚೇರಿ (Taluk Office) ಮುಂದೆ ರೈತ ಸಂಘದ (Raita Sangha) ಪದಾಧಿಕಾರಿಗಳು ಮಂಗಳವಾರ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ಬಡ ರೈತರಿಗೆ (Farmers) ಜಮೀನು ಮಂಜೂರು ಮಾಡಲು ಆಗ್ರಹಿಸಿ ಪ್ರತಿಭಟನೆ (Protest) ಮಾಡಿದರು.
ಹಲವು ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಒಂದು ವರ್ಷ ನಡೆದ ಪ್ರತಿಭಟನೆ ನಂತರ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದರೂ ರಾಜ್ಯ ಸರ್ಕಾರ ಇನ್ನೂ ವಾಪಸ್ ಪಡೆದಿಲ್ಲ. ಸಾಮಾಜಿಕ ಅರಣ್ಯಕ್ಕಾಗಿ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು ವಶಪಡಿಸಿಕೊಂಡು ರೈತರನ್ನು ಬೀದಿಗೆ ತಳ್ಳಲಾಗಿದೆ. ಸರ್ಕಾರ ಕೂಡಲೆ ಮಸೂದೆ ಮಂಡಿಸಿ ಗ್ರಾಮೀಣ ಭಾಗದ ರೈತ ಕಾರ್ಮಿಕ ಹಾಗೂ ಕೂಲಿಕಾರ್ಮಿಕರಿಗೆ ಭೂಮಿ ನೀಡಬೇಕು ಎಂದು ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎಚ್.ಪಿ.ಲಕ್ಷ್ಮಿನಾರಾಯಣ ಹೇಳಿದರು.
ಪ್ರಾಂತ ರೈತ ಸಂಘದ ಆದಿನಾರಾಯಣಸ್ವಾಮಿ, ದಪ್ಪರ್ತಿ ದೇವರಾಜು, ನಾಗರಾಜು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.