Bagepalli : ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲ್ಲೂಕು ಸಮಿತಿಯಿಂದ ಮಂಗಳವಾರ ಸಂಘಟನಾ ಸಮಾವೇಶ ಹಮ್ಮಿಕೊಳಲ್ಲಾಗಿತ್ತು. ಸಮಾವೇಶದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (CITU ಹಾಗೂ CWFI ಸಂಯೋಜಿತ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಮಾತಾನಾಡಿದ ಕಾರ್ಯದರ್ಶಿ ಕೆ.ಮಹಾಂತೇಶ್ “ಇತರೆ ಕಲ್ಯಾಣ ಮಂಡಳಿ, ನಿಗಮಗಳಿಗಿಂತ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಅನೇಕ ಸೌಲಭ್ಯಗಳು ಇದ್ದು ತಮ್ಮ ಹಾಗೂ ಮಕ್ಕಳ ಭವಿಷ್ಯಕ್ಕೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಸಿಕೊಳ್ಳಿ. ಮಂಡಳಿಯಲ್ಲಿ ಇದುವರೆಗೆ ₹11 ಸಾವಿರ ಕೋಟಿ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಮೀಸಲಿಡಲಾಗಿದ್ದು ಮಕ್ಕಳ ಪ್ರಾಥಮಿಕ ಶಿಕ್ಷಣದಿಂದ, ಉನ್ನತ ಶಿಕ್ಷಣದವರೆಗೂ ವಿದ್ಯಾರ್ಥಿ ವೇತನಗಳು, ಸಾಲಸೌಲಭ್ಯ, ಹೆರಿಗೆ ಭತ್ಯೆ, ಆಕಸ್ಮಿಕವಾಗಿ ಅಪಘಾತ, ಮರಣ ಹೊಂದಿದರೆ ಪರಿಹಾರ ಸಿಗುತ್ತದೆ” ಎಂದು ತಿಳಿಸಿದರು.
ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಸಿಪಿಎಂ ಯುವ ಮುಖಂಡ ಡಾ.ಅನಿಲ್ ಕುಮಾರ್, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ಪ್ರಾಂತ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್, ದಲಿತ ಹಕ್ಕುಗಳ ಸಮಿತಿ ಮುಖಂಡ ಅಶ್ವತ್ಥಪ್ಪ, ಹಾಸ್ಟೆಲ್ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮುನಿಯಪ್ಪ, ಗಾರೆ ಕೆಲಸಗಾರ ಸಂಘದ ಅಧ್ಯಕ್ಷ ಶಫೀವುಲ್ಲಾ, ಮರಗೆಲಸ ಸಂಘದ ಅಧ್ಯಕ್ಷ ಪೀರ್ ಸಾಬ್, ಎಲೆಕ್ಟ್ರೀಷಿಯನ್ ಸಂಘದ ಜಿಲ್ಲಾ ಅಧ್ಯಕ್ಷ ಗಂಗಾಧರ, ತಾಲ್ಲೂಕು ಅಧ್ಯಕ್ಷ ಮುಜೀಬ್, ಕಂಬಿಕೆಲಸಗಾರರ ಸಂಘದ ಅಧ್ಯಕ್ಷ ಶಿವ, ಮುಖಂಡ ವೆಂಕಟೇಶ್ ಸಮಾವೇಶದಲ್ಲಿ ಭಾಗವಹಿಸಿದರು.