Chikkaballapur: ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ (Hosahudya) ಗ್ರಾಮದಲ್ಲಿ ಸೋಮವಾರ ಪ್ಲೇಗ್ ಮಾರಮ್ಮ ದೇವಿಯ ರಥೋತ್ಸವ (Plegue Maramma Rathotsava) ಶ್ರದ್ಧಾಭಕ್ತಿಯಿಂದ ನೆರವೇರಿತು.
ಜೂನ್ 23ರಿಂದ ಜೂನ್ 26ರವರೆಗೆ ದೇವಾಲಯದಲ್ಲಿ ದೇವಾಲಯ ಸಮಿತಿ ನೇತೃತ್ವದಲ್ಲಿ ಪ್ಲೇಗ್ ಮಾರಮ್ಮ ದೇವಿಯ ಮಹಾರಾಜ ಗೋಪುರ, ಪಂಚಶಕ್ತಿ ಕಳಸ ಪ್ರತಿಷ್ಠಾಪನೆ, ಶಕ್ತಿ ಪೂಜಾ ಮಹಾಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮಗಳು ಜರುಗಿದವು.
ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರ ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ವಾಲಯ ಸಮಿತಿಯ ವೆಂಕಟಾಚಾರ್, ಗುರುಮೂರ್ತಾಚಾರ್, ಕೃಷ್ಣಪ್ಪ, ವೇಣಪ್ಪ ಮತ್ತಿತರರು ಉಪಸ್ಥಿತರಿದ್ದರು.
