Chikkaballapur : ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಬಿಜಿಎಸ್ ವರ್ಲ್ಡ್ ಸ್ಕೂಲ್ ಆವರಣದಲ್ಲಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ 2ನೇ ಇಂಟರ್ ಸ್ಕೂಲ್ ರೋಲರ್ ಸ್ಕೇಟಿಂಗ್ ಸೌಹಾರ್ದ ಸ್ಪರ್ಧೆ (Inter School Roller Skating competition) ಭಾನುವಾರ ನಡೆಸಲಾಯಿತು.
ಈ ಸಂಧರ್ಭದಲ್ಲಿ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಮಹಮದ್ ಜಬೀವುಲ್ಲಾ ಮಾತನಾಡಿ “ಸ್ಕೇಟಿಂಗ್ ಉತ್ಸಾಹಭರಿತ ಆಟ. ಅಸೋಸಿಯೇಷನ್‌ನಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆ ಯಾವ ರೀತಿ ಇರಲಿದೆ ಎನ್ನುವ ಬಗ್ಗೆ ತರಬೇತಿ ನೀಡುವ ಉದ್ದೇಶದಿಂದ ಸ್ಕೇಟಿಂಗ್ ಸೌಹಾರ್ದ ಸ್ಪರ್ಧೆ ನಡೆಸಲಾಗಿದ್ದು ಕೆ.ವಿ ಆಂಗ್ಲ ಶಾಲೆ, ಬಿಜಿಎಸ್ ವರ್ಲ್ಡ್ ಶಾಲೆ ಮತ್ತಿತರ ಶಾಲೆಗಳ 85ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿ ಯೇಷನ್ ಉಪಾಧ್ಯಕ್ಷ ಕೃಷ್ಣಾಚಾರಿ, ರೆಫ್ರೀಗಳಾದ ಸೈಯದ್ ಒವೇಜ್, ಮಹಮ್ಮದ್ ರೋಷನ್, ಇಲಾಹಿ ಜುನೈದ್, ರೋಷನ್ ಪಾಲ್ಗೊಂಡಿದ್ದರು.