Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸಂಸದ ಡಾ.ಕೆ.ಸುಧಾಕರ್ (Sudhakar K) ವತಿಯಿಂದ ಜನ ಸಂಪರ್ಕ ಸಭೆ (Jana Samparka Sabhe) ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್ “ಸಾಧ್ಯವಾದಷ್ಟು ಪ್ರತೀ ಸೋಮವಾರ ನಾನೇ ಖುದ್ದಾಗಿ ಕಚೇರಿಗೆ ಬಂದು ಸಾರ್ವಜನಿಕರನ್ನ ಭೇಟಿ ಮಾಡುತ್ತೇನೆ. ಚಿಕ್ಕಬಳ್ಳಾಪುರ ಜಿಲ್ಲೆಯಪ್ರತಿ ಇಲಾಖೆಗಳಲ್ಲಿ ಮಾಮೂಲಿ (ಹಣ) ವಸೂಲಿಗೆ ತಮ್ಮ ಬಂಧು, ಬಳಗವನ್ನು ನೇಮಿಸಿಕೊಳ್ಳಲಾಗಿದೆ. ನನ್ನ ಆಡಳಿತದಲ್ಲಿ ಯಾವುದೇ ಲಂಚ ಇರಲಿಲ್ಲ, ಸುಧಾಕರ್ ಹಣ ಪಡೆದಿದ್ದಾರೆ ಎಂದುಸುಳ್ಳು ಆರೋಪ ಮಾಡಿ ಅಪಪ್ರಚಾರ ನಡೆಸಿದರು. ಸಾರ್ವಜನಿಕರಿಗೆ, ರೈತರಿಗೆ ಯಾವುದೆ ರೀತಿಯಲ್ಲಿ ಸೇವೆಗಳು ಸಿಗುತ್ತಿಲ್ಲ. ಸುಸಜ್ಜಿತ ಆಸ್ಪತ್ರೆ ಮತ್ತು ಹೆದ್ದಾರಿಯಾದ ಕಾರಣ ಇಲ್ಲಿ ಟ್ರಾಮಾ ಕೇಂದ್ರ ಮಂಜೂರು ಮಾಡಿಸಿದ್ದೆವು ಆದರೆ ಈಗ ಚಿಂತಾಮಣಿಗೆ ಸಚಿವರು ತೆಗೆದುಕೊಂಡು ಹೋಗಿದ್ದಾರೆ” ಎಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕರು ಸಂಸದರಿಗೆ ಅಹವಾಲು ಸಲ್ಲಿಸಿದರು.