Chintamani : ಚಿಂತಾಮಣಿ ತಾಲೂಕ್ಕಿನ ಕೈವಾರದ ಯೋಗಿನಾರೇಯಣ ಸಭಾಂಗಣದಲ್ಲಿ ಭಾನುವಾರ ಯೋಗಿ ನಾರೇಯಣ ತಾತಯ್ಯರ (Kaiwra Yogi Nareyana) 189ನೇ ಜೀವ ಸಮಾಧಿ (Jeeva Samadhi) ಪ್ರವೇಶ ಪರ್ವ ಆರಾಧನಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ತಾತಯ್ಯರ ಮೂಲ ಮೂರ್ತಿ ಅಭಿಷೇಕ, ಅಷ್ಟಾವಧಾನ ಸೇವೆ, ಮಂಗಳಾರತಿ ನೆರವೇರಿಸಿ ಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾಮೂಹಿಕ ನಾಮ ಸಂಕೀರ್ತನೆ ನಡೆಯಿತು. ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯರನ್ನು ಸಭಾಂಗಣಕ್ಕೆ ಭಜನೆ ಮೂಲಕ ಕರೆತರಲಾಯಿತು.
ಈ ಸಂಧರ್ಭದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ಮಾತನಾಡಿ “ಭಕ್ತಿಯಿಂದ ಪ್ರಾರಂಭವಾಗುವ ಯೋಗದ ಪಯಣ ಕೊನೆಯಲ್ಲಿ ಪರಮಾತ್ಮನಲ್ಲಿ ಐಕ್ಯವಾಗುವುದೇ ಜೀವಸಮಾಧಿ. ನಾನು ಮತ್ತೆ ಈ ಭೂಮಂಡಲದಲ್ಲಿ ಹುಟ್ಟುವುದಿಲ್ಲ. ಸದ್ಗುರುವಾದ ಪರಮಾತ್ಮನಲ್ಲಿ ಐಕ್ಯವಾಗಿದ್ದೇನೆ. ನನ್ನಲ್ಲಿ ಆಸೆಗಳೆಲ್ಲ ಇಂಗಿಹೋದ ನಮಗೆ ಇದೇ ಕಡೇ ಜನ್ಮ ಎಂದು ತಾತಯ್ಯ ಹೇಳಿದ್ದಾರೆ” ಎಂದು ತಿಳಿಸಿದರು.
ಮಠದ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಬಾಲಕೃಷ್ಣ ಭಾಗವತರ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಕೆ.ಎಂ. ತ್ಯಾಗರಾಜ್ ಭಾಗವಹಿಸಿದ್ದರು.