Home News Gauribidanur GTTC ತರಬೇತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ

GTTC ತರಬೇತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ

0
Kananda rajyotsava in Gauribidanur

Gauribidanur : ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ‌ಮತ್ತು ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತೆಲುಗು ಭಾಷೆಯ ಪ್ರಭಾವದಿಂದ ಗಡಿ‌ಭಾಗದಲ್ಲಿ ‌ಕನ್ನಡಕ್ಕೆ ಯಾವುದೇ ತೊಂದರೆಯಾಗದಂತೆ ಗಮನಹರಿಸಿ ಕನ್ನಡ ಭಾಷೆ ಎಂದಿಗೂ ಕಲ್ಮಶವಾಗದಂತೆ ಜಾಗರೂಕರಾಗಬೇಕು. ಕನ್ನಡ ನಾಡಿನ ನೆಲ, ಜಲ, ಭಾಷೆಯನ್ನು ಪ್ರೀತಿಸುವ ಜತೆಗೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಟಿಟಿಸಿ ಕೇಂದ್ರದ ವ್ಯವಸ್ಥಾಪಕ ಸಿ.ತಿಪ್ಪೇಸ್ವಾಮಿ ಹೇಳಿದರು.

ಮೊದಲ‌ ಬಾರಿಗೆ ತಾಂತ್ರಿ‌ಕ‌ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ರಾಜ್ಯದ ಗಡಿ‌ಭಾಗದಲ್ಲಿ ಕನ್ನಡದ ಕಂಪನ್ನು ಸಾರುವ ಪ್ರಯತ್ನ ಮಾಡಲು ಮುಂದಾಗಿದ್ದೇವೆ. ಯುವಕರು ರಾಷ್ಟ್ರದ ‌ಸಂಪತ್ತಾಗಿದ್ದು, ಪ್ರಾಮಾಣಿಕ ಪ್ರಯತ್ನದಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಉಳಿಸಿ‌‌, ಬಳಸಿ‌ ಬೆಳೆಸಬೇಕು ಎಂದು ಸಾಹಿತಿ ಮಂಜುನಾಥ್ ‌ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಸೇರಿದಂತೆ ‌ವಿವಿಧ ಕ್ರೀಡಾಚಟುವಟಿಕೆಗಳಲ್ಲಿ‌ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತ್ತು. ಉಪನ್ಯಾಸಕ ಪಣೀಂದ್ರ, ಚೈತ್ರ, ಮಂಜುಳಾ, ಸೋನಿಯಾ, ಪ್ರಸನ್ನ, ಶ್ರೀನಿವಾಸ್, ದರ್ಶನ್, ರಾಜೇಶ್, ಉಪೇಂದ್ರ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version