Home News Chintamani ಗ್ರಾಮಸ್ಥರಿಂದ ತುಳವನೂರು ಕೆರೆಗೆ ಬಾಗಿನ ಅರ್ಪಣೆ

ಗ್ರಾಮಸ್ಥರಿಂದ ತುಳವನೂರು ಕೆರೆಗೆ ಬಾಗಿನ ಅರ್ಪಣೆ

0
Chintamani Rain Lake Full

Chintamani : 15 ವರ್ಷಗಳ ನಂತರ ಚಿಂತಾಮಣಿ ತಾಲ್ಲೂಕಿನ ತುಳವನೂರು (Tuluvanuru) ಗ್ರಾಮದ ದೊಡ್ಡ ಕೆರೆ ಕೋಡಿ ಹರಿದಿರುವುದ್ದರಿಂದ ಊರಿನ ಜನ ಶುಕ್ರವಾರ ಪೂಜೆ ಪುನಸ್ಕಾರವನ್ನು ಮಾಡಿ, ಗ್ರಾಮದ ಮಹಿಳೆಯರು ತಲೆಯ ಮೇಲೆ ತಂಬಿಟ್ಟಿನ ದೀಪಗಳನ್ನು ಹೊತ್ತು ಕೆರೆಗೆ ಬಾಗಿನ ಅರ್ಪಿಸಿದ್ದರು.

” ದಿ.ಟಿ.ಕೆ.ಗಂಗಿರೆಡ್ಡಿಯವರ ಪರಿಶ್ರಮದಿಂದ ನಮ್ಮೂರಿನ ದೊಡ್ಡಕೆರೆ ತುಂಬಿದೆ, 50 ವರ್ಷಗಳ ಹಿಂದೆಯೇ ಬುರುಡಗುಂಟೆ ಕೆರೆ ಕೋಡಿ ಹರಿದ ನೀರನ್ನು ನಮ್ಮ ಕೆರೆಗೆ ತರಲು ಸುಮಾರು ಐವತ್ತು ಅಡಿ ಆಳದ ಕಾಲುವೆಯನ್ನು ಅವರು ತೋಡಿಸಿದ್ದರು. ಪುನಃ 2018 ರಲ್ಲಿ ಕೆರೆಯ ಹೂಳನ್ನು ತೆಗೆಸಿ ನೀರು ಸರಾಗವಾಗಿ ಹರಿದು ಬರುವಂತೆ ಮಾಡಿದ್ದರಿಂದ ಕೆರೆ ತುಂಬಿ ಕೋಡಿ ಹರಿದ ಸಂಭ್ರಮ ನಮಗೆ ಸಂತೋಷವನ್ನು ತಂದಿದೆ ಎಂದು ಗ್ರಾಮದ ಮುಖಂಡ ಕುರ್ಲಾರೆಡ್ಡಿ ಹೇಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version