Home News Gauribidanur ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
Gauribidanur Karnataka Yadava Yuva Vedike Talent Award for SSLC And PUC Students

Gauribidanur : ಕರ್ನಾಟಕ ಯಾದವ ಯುವ ವೇದಿಕೆ (Karnataka Yadava Yuva Vedike) ವತಿಯಿಂದ ಭಾನುವಾರ ಗೌರಿಬಿದನೂರು ನಗರದ ಡಾ.ಎಚ್.ಎನ್ ಕಲಾಮಂದಿರ (Dr. H N Kalamandira) ದಲ್ಲಿ 6ನೇ ವರ್ಷದ SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ (Students) ಪ್ರತಿಭಾ ಪುರಸ್ಕಾರ (Talent Award) ಕಾರ್ಯಕ್ರಮ ಹಮ್ಮಿಕೊಳ್ಳಾಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ನಾಗರಾಜ್ ಯಾದವ್ “ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾದವ ಸಮುದಾಯ ಸೂಕ್ತ ಸ್ಥಾನಮಾನ ಪಡೆಯಲು ಹಾಗೂ ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಹಕರಿಸಬೇಕು” ಎಂದು ಹೇಳಿದರು.

ರಾಜ್ಯ ಯಾದವ ಸಮುದಾಯದ ಗೌರವಾಧ್ಯಕ್ಷ ಗಂಗಾಧರ್, ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ್ ಯಾದವ್, ತಾಲ್ಲೂಕು ಅಧ್ಯಕ್ಷ ಕೆ.ನರಸಿಂಹಮೂರ್ತಿ, ಬಿ.ಪಿ.ಕೃಷ್ಣಮೂರ್ತಿ, ಬಿ.ಪಿ‌.ಅಶ್ವತ್ಥನಾರಾಯಣಗೌಡ, ಮುನಿಲಕ್ಷ್ಮಮ್ಮ, ಬಾಲಪ್ಪ, ರಾಮ್ ಗೋಪಾಲ್, ಗಂಗಾಧರ್ ಯಾದವ್, ಸಿದ್ಧಗಂಗಪ್ಪ, ನಾರಾಯಣಸ್ವಾಮಿ, ಯರ್ರಗುಂಟೆ ಕೃಷ್ಣ, ವಿ.ಎನ್.ಮೈಲಪ್ಪ, ವೈ.ಎಚ್.ನವೀನ್, ವಿ.ಎನ್.ಬಾಲಕೃಷ್ಣ, ಬಾಬುರೆಡ್ಡಿ, ವೇಣು ಯಾದವ್, ನಾಗೇಶ್, ಪುಟ್ಟರಾಜು, ಆನಂದ್, ಸಂದೀಪ್ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version