Home News Chikkaballapur ಭಾರತೀಯ ಸ್ವಾತಂತ್ರ್ಯ ಚಳವಳಿ ಕುರಿತಂತೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಭಾರತೀಯ ಸ್ವಾತಂತ್ರ್ಯ ಚಳವಳಿ ಕುರಿತಂತೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

0
KJVS Chikkaballapur District Level Quiz

Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲ್ಲೂಕು ಕೆಜೆವಿಎಸ್‌ ವತಿಯಿಂದ ಭಾರತೀಯ ಸ್ವಾತಂತ್ರ್ಯ ಚಳವಳಿ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆ (District Level Quiz) ನಡೆಸಲಾಯಿತು. ವಿಜೇತರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (KJVS) ರಾಜ್ಯ ಕಾರ್ಯದರ್ಶಿ ಈ.ಬಸಬರಾಜ್ ಭಾನುವಾರ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಈ.ಬಸಬರಾಜ್ “ಶಿಕ್ಷಣ ಕಲಿತವರಲ್ಲೇ ಮೌಢ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಅವರಲ್ಲಿ ಮಾನವೀಯತೆ ಮರೆಯಾಗಿ ಸ್ವಾರ್ಥವೇ ಹೆಚ್ಚುತ್ತಿದ್ದು ಮಕ್ಕಳಲ್ಲಿ ಮೌಢ್ಯ ಓಡಿಸಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು. ನಮ್ಮ ಹಿಂದಿನವರು ಅನಕ್ಷರಸ್ಥರಾಗಿದ್ದರೂ ಅವರಲ್ಲಿ ಧರ್ಮ, ಮಾನವೀಯತೆ ಸಹಕಾರ ತತ್ವ, ಸ್ನೇಹಪರತೆ ತುಂಬಿ ತುಳುಕುತ್ತಿತ್ತು. ಇದರಿಂದ ಸಮಾಜವು ಸೌಖ್ಯದಿಂದ ಕೂಡಿತ್ತು. ಇಂದಿನ ಪೀಳಿಗೆಯವರಲ್ಲಿ ಪರೋಪಕಾರಿ ಗುಣ, ಸಹಕಾರಿ ಮನೋಭಾವ ಕಣ್ಮರೆಯಾಗುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ಎಂ.ರೆಡ್ಡಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಬಿ.ಎನ್.ಮುನಿಕೃಷ್ಣಪ್ಪ, ತಾಲ್ಲೂಕು ಗೌರವಾಧ್ಯಕ್ಷೆ ಎ.ಸರಸಮ್ಮ, ಅಡ್ಡಗಲ್ ಆನಂದ್, ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷೆ ಸುಶೀಲಾ ಮಂಜುನಾಥ್, ಡಿ.ಎಂ.ಶ್ರೀರಾಮ್, ನರಸಿಂಹರೆಡ್ಡಿ ರೆಹಮತ್ತುಲ್ಲಾ, ಕೆ.ಎಂ.ಕಾವ್ಯ, ಜಿ.ಅಣ್ಣಮ್ಮ, ಮಹಾಂತೇಶ್, ಎಂ.ವಿ.ಶ್ರೀನಿವಾಸ್, ಮಮತಾ ಪಾಲ್ಗೊಂಡಿದ್ದರು‌.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version