Chikkaballapur : ಚಿಕ್ಕಬಳ್ಳಾಪುರ ನಗರದ ನಂದಿ ರಂಗ ಮಂದಿರದಲ್ಲಿ ಭಾನುವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ (World Science Day) ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (KJVS) ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆನ್‌ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ (Quiz) ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಜೆವಿಎಸ್ ರಾಜ್ಯ ಕಾರ್ಯದರ್ಶಿ ಈ.ಬಸವರಾಜು “ಚಿಕ್ಕಬಳ್ಳಾಪುರದಲ್ಲಿ ಕೆಜೆವಿಎಸ್ ಸೊಗಸಾಗಿ ಬೆಳೆಯುತ್ತಿದ್ದು ಉಳಿದ ತಾಲ್ಲೂಕುಗಳಲ್ಲಿಯೂ ಕೆಜೆವಿಎಸ್ ಪ್ರಾರಂಭವಾಗಬೇಕಾಗಿದೆ. ಮಕ್ಕಳು ಹಾಗೂ ಜನರಿಗೆ ವೈಜ್ಞಾನಿಕ ವಿಚಾರಗಳನ್ನು ಬಿತ್ತುವ ವಿಚಾರಗಳು ಸಮಿತಿಗಳ ಮೂಲಕ ಇನ್ನಷ್ಟು ಬಲಗೊಳ್ಳಲಿ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎಂ.ರೆಡ್ಡಪ್ಪ, ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಕೋಡಿ ರಂಗಪ್ಪ, ಸಮಿತಿ ತಾಲ್ಲೂಕು ಅಧ್ಯಕ್ಷೆ ಸುಶೀಲಾ ಮಂಜುನಾಥ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕು ಗೌರವಾಧ್ಯಕ್ಷೆ ಎ.ಸರಸಮ್ಮ, ಜಿಲ್ಲಾ ಸಲಹಾ ಸಮಿತಿ ಸದಸ್ಯ ಬಿ.ಎನ್.ಮುನಿಕೃಷ್ಣಪ್ಪ, ಮಾಧ್ಯಮ ಕಾರ್ಯದರ್ಶಿ ಕೆ.ಎಸ್.ನಾರಾಯಣಸ್ವಾಮಿ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ವೆಂಕಟೇಶಪ್ಪ, ಕೆ.ಎಂ.ಕಾವ್ಯ, ಮಹಾಂತೇಶ್, ಡಿ.ಎಂ.ಶ್ರೀರಾಮ್, ಜಿ.ಅಣ್ಣಮ್ಮ, ಯಲುವಹಳ್ಳಿ ಸೊಣ್ಣೇಗೌಡ ,ಸೌಭಾಗ್ಯ, ಎ.ಆರ್.ಶಶಿಕಲಾ, ಜಯಭಾರತಿ, ಆನಂದಪ್ಪ, ಚಿಕ್ಕರೆಡ್ಡಪ್ಪ, ಮುನಿಕೃಷ್ಣಪ್ಪ ಮತ್ತಿತ್ತರರು ಪಾಲ್ಗೊಂಡಿದ್ದರು.