Home News Kolar ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗಂಡಸರು ಸಿಗಲಿಲ್ಲವೇ? : ಶಾಸಕ

ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗಂಡಸರು ಸಿಗಲಿಲ್ಲವೇ? : ಶಾಸಕ

0
Kolar Lokasabha Election JDS BJP Coordination Meeting

Kolar : ಕೋಲಾರ ನಗರದ ನಾರಾಯಣಿ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ ಜೆಡಿಎಸ್-ಬಿಜೆಪಿ‌ ಸಮನ್ವಯ‌ ಸಮಿತಿ ಸಭೆ (JDS BJP Coordination Meeting)ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ “ಕೋಲಾರ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದವರು ಬೆಂಗಳೂರಿನಿಂದ ಅಭ್ಯರ್ಥಿ ಕರೆ ತಂದಿದ್ದು ಆ ಪಕ್ಷದವರಿಗೆ ಕ್ಷೇತ್ರದಲ್ಲಿ ಯಾರೂ ಗಂಡಸರು ಸಿಗಲಿಲ್ಲವೇ. ಕಾಂಗ್ರೆಸ್‌ನವರು ಅಭ್ಯರ್ಥಿ ಹುಡುಕಲು ಪರದಾಡಿ ತಿಂಗಳಿನಿಂದ ಜಗಳ‌ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಕೋಲಾರದ‌ ಮರ್ಯಾದೆ ತೆಗೆದರು. ಕೊನೆಗೂ ಅವರಿಗೆ ಸ್ಥಳೀಯ ಅಭ್ಯರ್ಥಿ ಸಿಗಲೇ ಇಲ್ಲ. ದೇಶಕ್ಕೆ ಮೋದಿ ಬೇಕು, ರಾಜ್ಯಕ್ಕೆ ಕುಮಾರಸ್ವಾಮಿ ಬೇಕು ಆದ್ದರಿಂದ ಸ್ಥಳೀಯ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ನೀವು ಬೆಂಬಲಿಸಿ” ಎಂದು ತಿಳಿಸಿದರು.

ಸಂಸದ ಎಸ್.ಮುನಿಸ್ವಾಮಿ, ಶಾಸಕ ರವಿಕುಮಾರ್, ಮಾಜಿ ಶಾಸಕರಾದ ವರ್ತೂರು ಪ್ರಕಾಶ್‌, ಕೆ.ಎಸ್‌.ಮಂಜುನಾಥ್‌ ಗೌಡ, ವೈ.ಸಂಪಂಗಿ, ಜೆ.ಕೆ.ಕೃಷ್ಣಾರೆಡ್ಡಿ, ಎಂ.ನಾರಾಯಣಸ್ವಾಮಿ, ರಾಜಣ್ಣ, ತೂಪಲ್ಲಿ ಚೌಡರೆಡ್ಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಬಿಜೆಪಿ ಮಾಧ್ಯಮ ಪ್ರಮುಖ್‌ ಪ್ರವೀಣ್ ಗೌಡ, ಕೆಂಬೋಡಿ ನಾರಾಯಣಸ್ವಾಮಿ ಸೇರಿದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಇದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version