Kolar : ಕೋಲಾರ ಲೋಕಸಭಾ ಚುನಾವಣೆಗೆ (Kolar Lokasabha) ನಾಮಪತ್ರ (Nomination)ಸಲ್ಲಿಸುವ ಪ್ರಕ್ರಿಯೆಗೆ ಗುರುವಾರ ತೆರೆಬಿದ್ದಿದ್ದು, 25 ಅಭ್ಯರ್ಥಿಗಳಿಂದ 33 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ವಿ.ಗೌತಮ್, ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬು, ಕೆಆರ್‌ಎಸ್ ಪಕ್ಷದಿಂದ ಮಹೇಶ್ ಎ.ವಿ., ಉತ್ತಮ ಪ್ರಜಾಕೀಯ ಪಾರ್ಟಿಯಿದ ದೇವರಾಜ ಎ., ಸೋಷಿಯಲಿಸ್ಟ್ ಪಾರ್ಟಿಯಿಂದ (ಇಂಡಿಯಾ) ಡಿ.ಗೋಪಾಲಕೃಷ್ಣ, ಬಹುಜನ ಸಮಾಜ ಪಾರ್ಟಿಯಿಂದ ಸುರೇಶ್ ಎಸ್.ಬಿ., ಎನ್‌ಎಂಕೆ ಪಕ್ಷದ ಅಭ್ಯರ್ಥಿಯಾಗಿ ಎಲ್.ಬಾಬು, ಆರ್‌ಪಿಐ ಪಕ್ಷದಿಂದ ಎನ್.ಜೆ.ನರಸಿಂಹಮೂರ್ತಿ, ಲೋಕಶಕ್ತಿ ಪಕ್ಷದಿಂದ ಎಂ.ಎಸ್.ಬದರಿನಾರಯಣ, ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ (ಕರ್ನಾಟಕ) ಪಕ್ಷದಿಂದ ತಿಮ್ಮರಾಯಪ್ಪ, ದಿಲ್ಲಿ ಜನತಾ ಪಾರ್ಟಿಯಿಂದ ಕೆ.ಆರ್.ದೇವರಾಜ, ವಿಸಿಕೆಯಿಂದ (ವಿಡುದಲೈ ಚಿರತೆಗಳ್ ಕಚ್ಚಿ) ಎಂ.ವೇಣುಗೋಪಾಲ, ಪಕ್ಷೇತರ ಅಭ್ಯರ್ಥಿಗಳಾಗಿ ಆರ್.ರಂಜಿತ್ ಕುಮಾರ್, ಎಂ.ವೆಂಕಟಸ್ವಾಮಿ, ಸುಮನ್ ಎಚ್.ಎನ್, ಬಿ.ಇ.ವಿಶ್ವನಾಥ್, ಕೆ.ಎಚ್.ಮಧುಸೂದನ್, ಎಂ.ಮುನಿಗಂಗಪ್ಪ, ಆರ್.ರಾಜೇಂದ್ರ, ಶ್ರೀನಿವಾಸ ಪಿ., ಎ.ಟಿ.ಕೃಷ್ಣನ್, ಎಸ್.ಎನ್.ನಾರಾಯಣಸ್ವಾಮಿ ವಿ., ಕೃಷ್ಣಯ್ಯ ಎನ್., ಚಂದ್ರಶೇಖರ ಎಂ., ಜಿ.ಲಲಿತಾ ನಾಮಪತ್ರ ಸಲ್ಲಿಸಿದ್ದಾರೆ.
ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದರು.