Chintamani : ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿ (Kurutahalli) ನೆಲೆಸಿರುವ ವೀರಾಂಜನೇಯಸ್ವಾಮಿ ಬ್ರಹ್ಮ ರಥೋತ್ಸವವು (Veeranjaneya Swamy Brahma Rathotsava) ಬುಧವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಕಲಶಾರಾಧನೆ, ಅಭಿಷೇಕ, ಹೋಮ, ಅಷ್ಟಾವಧಾನ ಸೇವೆ , ಪೂರ್ಣಾಹುತಿ, ಬಲಿಹರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ವೀರಾಂಜನೇಯಸ್ವಾಮಿಗೆ ಬೆಣ್ಣೆ ಅಲಂಕಾರ ಏರ್ಪಡಿಸಲಾಗಿತ್ತು. ದೇವಾಲಯದ ಒಳಗೆ ಹಾಗೂ ಹೊರಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.
ಶ್ರೀರಾಮಚಂದ್ರ ಸಮೇತ ಹನುಮಂತನ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಕೈವಾರ ಕ್ಷೇತ್ರ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ, ದೇವಾಲಯದ ಧರ್ಮದರ್ಶಿಗಳು ಚಾಲನೆ ನೀಡಿದ ರಥೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥವು ಸಂಚರಿಸಿತು.
ಬೆಳಗ್ಗೆಯಿಂದ ದೇವಾಲಾಯಕ್ಕೆ ಭಕ್ತರ ಆಗಮನ ಸಾಧಾರಣವಾಗಿತ್ತು. ಭಕ್ತರಿಗೆ ಬಿಸಿಲ ಬೇಗೆಯನ್ನು ತಣಿಸಲು ಟ್ರಾಕ್ಟರ್‌ಗಳಲ್ಲಿ ಪಾನಕ, ಕೋಸುಂಬರಿ, ಮಜ್ಜಿಗೆಯನ್ನು ವಿತರಿಸಲಾಯಿತು.
ದೇವಾಲಯದ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಟ್ರಸ್ಟಿಗಳಾದ ಸೀನಪ್ಪ, ಗೋವಿಂದಪ್ಪ, ತಮ್ಮಾರೆಡ್ಡಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur