Malur : ಭಾನುವಾರ ಮಾಲೂರು ಪಟ್ಟಣದ ಐತಿಹಾಸಿಕ ಧರ್ಮರಾಯಸ್ವಾಮಿ ದ್ರೌಪತಾಂಬ ಕರಗ (Dharmarayaswamy Droupathamba Karaga) ಮಹೋತ್ಸವ ಹಾಗೂ ಪಟಾಲಮ್ಮ, ಮುತ್ಯಾಲಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಧರ್ಮರಾಯಸ್ವಾಮಿ ದ್ರೌಪತಾಂಬ ಹೂವಿನ ಕರಗ ಭಾನುವಾರ ರಾತ್ರಿ 11.10ಕ್ಕೆ ವೀರ ಕುಮಾರರ ಹಲಗು ಸೇವೆ ನಡುವೆ ದೇವಾಲಯದಿಂದ ಕರಗ ಹೊರಬಂತು. ರಾತ್ರಿ ಪೂರ್ತಿ ಮಾಲೂರಿನಲ್ಲಿ ಸಂಚರಿಸಿದ ಕರಗ ಸೋಮವಾರ ಬೆಳಿಗ್ಗೆ 10.30ಕ್ಕೆ ದೇವಾಲಯದ ಬಳಿ ನಿರ್ಮಾಣ ಮಾಡಿದ್ದ ಅಗ್ನಿಕುಂಡದಲ್ಲಿ ಹೆಜ್ಜೆ ಹಾಕುತ್ತಾ ದೇವಾಲಯ ತಲುಪಿ ಸಂಪನ್ನಗೊಂಡಿತು. ಕರಗ ಮಹೋತ್ಸವ ಪ್ರಯುಕ್ತ ಪಟ್ಟಣದ ಪಟಾಲಮ್ಮ, ಮುತ್ಯಾಲಮ್ಮ, ಸಪಲಾಂಬ, ವೀರಾಂಜನೇಯ, ಶಂಕರನಾರಾಯಣ ಸ್ವಾಮಿ, ಕೈವಾರ ತಾತಯ್ಯ, ಸುಬ್ರಮಣ್ಯ ಸ್ವಾಮಿ, ಸುದ್ದಗುಂಟೆ ಅಂಜನೇಯಸ್ವಾಮಿ ಸೇರಿದಂತೆ ಹಲವು ದೇವಾಲಯಗಳ ಪಲ್ಲಕ್ಕಿಗಳು ಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹೂಡಿ ವಿಜಯಕುಮಾರ್, ಎಂ.ಪಿ.ವಿಜಯಕುಮಾರ್, ಕೃಷ್ಣಪ್ಪ, ಪಿ.ವೆಂಕಟೇಶ್, ಎಂ.ಸಿ.ರವಿ, ಸಿ.ಪಿ ನಾಗರಾಜ್, ಎಂ.ರಾಮಮೂರ್ತಿ, ಅಭಿಲಾಷ್, ಮಂಜುನಾಥ್, ಮಂಜು, ಕೆ.ರಮೇಶ್, ಲಕ್ಷ್ಮಿ ನಾರಾಯಣ, ಪ್ರದೀಪ್ ಸೇರಿದಂತೆ ಪುರಸಭಾ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.