20.6 C
Bengaluru
Saturday, December 7, 2024

ಮಂಚನಬಲೆಯ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ ಆರಂಭ

- Advertisement -
- Advertisement -

Chikkaballapur: ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಆರಂಭಿಸಿರುವ 60 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ ಅನ್ನು ಮಂಗಳವಾರ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಮೊದಲ ಅಲೆಗಿಂತ ಎರಡನೇ ಅಲೆ ತೀವ್ರವಾಗಿದೆ. ಆದರೆ ಸಾವಿನ ಪ್ರಮಾಣ ಗಮನಿಸಿದರೆ ನೂರಕ್ಕೆ ಇಬ್ಬರು ಮೃತಪಡುತ್ತಿದ್ದಾರೆ. ಸೋಂಕು ಬಂದಿದೆ ಎನ್ನುವುದು ತಿಳಿದ ತಕ್ಷಣವೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋವಿಡ್‌ ಸೋಂಕಿತರು ಯಾವುದೇ ಕಾರಣಕ್ಕೂ ಭಯಪಡಬಾರದು. ಭಯ ಮನಸ್ಸನ್ನು ಕೊಲ್ಲುತ್ತದೆ. ಧೈರ್ಯವೇ ಎಲ್ಲ ಸಾಧನೆಗೂ ಮೂಲ ಎನ್ನುವುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣವೇ ಭಯಪಡುವುದು ಬೇಡ. ಜನರು ಸೋಂಕು ತಗುಲದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.

ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಕೊರೊನಾ ಚಿಕಿತ್ಸೆ ದೊರೆಯಬೇಕು, ಸೋಂಕು ಬಂದಂತವರು ಯಾರು ಭಯ ಭೀತಿಗೊಳಗಾಗದೆ ಸಕಾಲದಲ್ಲಿ ವೈಧ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು, ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಶ್ರೀ ಮಠ ಸಂಪೂರ್ಣ ಸಹಕಾರ ನೀಡುತ್ತೇವೆ. ಈಗಾಗಲೇ ಮಠದಿಂದ ನಾಲ್ಕು ಹಾಸ್ಟೆಲ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಮತ್ತಷ್ಟು ಕೋವಿಡ್ ಕೇರ್ ಸೆಂಟರ್‌ಗಳು ಆರಂಭವಾದರೆ ರೋಗಿಗಳನ್ನು ಉತ್ತಮವಾಗಿ ನೋಡಿಕೊಳ್ಳಬಹುದು. ಸೋಂಕಿನ ಪ್ರಸರಣ ತಡೆಯಬಹುದು ಎಂದರು.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕೋವಿಡ್ ಕೇರ್ ಸೆಂಟರ್ ಅರಂಭಿಸಿದೆ. ಲಸಿಕೆ ಹಾಕಲಾಗುತ್ತದ. ಎಲ್ಲರೂ ಲಸಿಕೆ ಮಾಡಿಸಿಕೊಂಡಿದ್ದೇ ಆದರೆ ಮೂರನೇ ಅಲೆಯ ತೀವ್ರತೆಯನ್ನು ತಡೆಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಂಜುಳಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಚಾರಿ, ಆರೋಗ್ಯ ಇಲಾಖೆಯ ಅಧಿಕಾರಿ, ಸ್ಥಳೀಯ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು

ಆದಿಚುಂಚನಗಿರಿ ಮಠದಿಂದ ನೂರಾರು ಮಕ್ಕಳು ಶಿಕ್ಷಣ ಕಲಿತಿದ್ದಾರೆ. ಕೋವಿಡ್‌ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮಠದಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
- Advertisement -
Latest news
- Advertisement -
Related news
- Advertisement -
error: Content is protected !!