Chikkaballapur : ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್‌ನಿಂದ (MS Ramaiah Youth Foundation) ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ರಸ್ತೆಯ ಸಂತ ಜೋಸೆಫರ ಶಾಲೆ ಆವರಣದಲ್ಲಿ ಶನಿವಾರ ಉದ್ಯೋಗ ಮೇಳ (Job Fair) ನಡೆಯಲಿದೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರ ನೇತೃತ್ವದಲ್ಲಿ ಮೇಳ ನಡೆಯಲಿದ್ದು ಸುಮಾರು 75 ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ. ಸಾವಿರಾರು ಮಂದಿ ಆನ್‌ಲೈನ್‌ನಲ್ಲಿ ಮೂಲಕ ಈಗಾಗಲೇ ನೋಂದಣಿ ಆಗಿದ್ದು ಸ್ಥಳದಲ್ಲಿಯೂ ಸಹ ನೋಂದಣಿಗೆ ಅವಕಾಶವಿದೆ. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮೇಳ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಮತ್ತಿತರರು ಪಾಲ್ಗೊಳ್ಳುವರು.
ಉದ್ಯೋಗ ಮೇಳದ ಜೊತೆಗೆ ಸಾಲ ಮೇಳವೂ ನಡೆಯಲಿದೆ. ಐದಾರು ಬ್ಯಾಂಕುಗಳು ಕೃಷಿ ಸಾಲ, ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಿವೆ ಎಂದು ಫೌಂಡೇಶನ್ ಸಿಬ್ಬಂದಿ ತಿಳಿಸಿದರು.