Home News ಮೈನಾ ಹಕ್ಕಿಗಳ ನಿಗೂಢ ಸಾವು

ಮೈನಾ ಹಕ್ಕಿಗಳ ನಿಗೂಢ ಸಾವು

0
Mysterious Myna birds Death

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯಲ್ಲಿ ಸುಮಾರು ಮೂರು ನಾಲ್ಕು ಕಡೆ ಏಳೆಂಟು ಮೈನಾ ಹಕ್ಕಿಗಳು (Myna Birds) ನಿಗೂಢವಾಗಿ ಸಾವನ್ನಪ್ಪಿವೆ (Mysterious Death).

 ಹತ್ತಿರದಲ್ಲಿ ಯಾವುದೇ ವಿದ್ಯುತ್ ತಂತಿಗಳಿಲ್ಲ, ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳಾಗಲೀ ಇಲ್ಲ. ಅಕಸ್ಮಾತ್ ಯಾವುದಾದರೂ ವೈರಸ್ ರೋಗದಿಂದ ಇವು ಮೃತಪಟ್ಟಿವೆಯಾ, ಇವುಗಳಿಗೆ ಅಕಸ್ಮಾತ್ ವೈರಸ್ ತಗುಲಿದ್ದರೆ, ಅದು ಮನುಷ್ಯರಿಗೆ ಹರಡಬಹುದಾ ಎಂಬುದನ್ನು ತಜ್ಞರು ತಿಳಿಯಪಡಿಸಬೇಕಿದೆ. ಕೇವಲ ಮೈನಾ (ಗೊರವಂಕ) ಹಕ್ಕಿಗಳೇ ಏಕೆ ಸಾಯುತ್ತಿವೆ ಎಂಬುದನ್ನು ಸಹ ತಿಳಿಯಬೇಕಿದೆ.

 ರಾಯಪ್ಪನಹಳ್ಳಿಯಲ್ಲಿ ಗ್ರಾಮದ ಸತ್ತಿ ರೆಡ್ಡಿ ಅವರು ಈ ಹಕ್ಕಿಗಳು ಸತ್ತಿರುವುದನ್ನು ಕಂಡು ಒಂದೆರಡು ಕಡೆ ಮಣ್ಣು ಮುಚ್ಚಿದ್ದಾರೆ. ಅವರು ಈ ಹಕ್ಕಿಗಳ ನಿಗೂಢ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವುದಲ್ಲದೆ, ಕಳೆದ ಒಂದೆರಡು ತಿಂಗಳಿನಿಂದ ಈ ಭಾಗದಲ್ಲಿ ಶೇ 80 ರಷ್ಟು ಕಾಗೆಗಳು ಕಣ್ಮರೆಯಾಗಿವೆ ಎಂಬ ಮತ್ತೊಂದು ಆತಂಕದ ಸಂಗತಿಯನ್ನು ಸಹ ತಿಳಿಸಿದ್ದಾರೆ.

 ಈ ಬಗ್ಗೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಅವರನ್ನು ಕೇಳಿದಾಗ ಅವರು, “ಹಕ್ಕಿಗಳು ಮೃತಪಟ್ಟಿರುವ ಚಿತ್ರಗಳನ್ನು ಗಮನಿಸಿದಾಗ ಅವು ತೋಟಗಳ ಪಕ್ಕದಲ್ಲಿ ಸತ್ತಿವೆ. ಬಹುಶಃ ಕೀಟನಾಶಕಗಳ ಸೇವನೆಯಿಂದ ಸತ್ತಿರಬಹುದು ಎನ್ನಿಸುತ್ತದೆ. ವೈರಲ್ ಇನ್ ಫ್ಲುಯೆನ್ಜಾ ಖಾಯಿಲೆಯಿಂದಲೂ ಸತ್ತಿರಬಹುದು. ಈ ವೈರಲ್ ಖಾಯಿಲೆ ಮನುಷ್ಯರಿಗೆ ಹರಡುವುದಿಲ್ಲ್. ಹೆಬ್ಬಾಳದ ಬಳಿ ಇರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ನಾಳೆ ಮೂರು ಮೃತಪಟ್ಟಿರುವ ಹಕ್ಕಿಗಳನ್ನು ಕಳಿಸಿ ಅಲ್ಲಿಂದ ವರದಿಯನ್ನು ಪಡೆಯಲಾಗುವುದು. ಕಣ್ಮರೆಯಾಗಿರುವ ಕಾಗೆಗಳ ಬಗ್ಗೆಯೂ ನಮ್ಮ ಇಲಾಖೆಯ ವೈದ್ಯರು ಸ್ಥಳೀಯರೊಂದಿಗೆ ಮಾತನಾಡಿ ಮಾಹಿತಿ ಪಡೆಯುವರು” ಎಂದು ಹೇಳಿದರು. 

For Daily Updates WhatsApp ‘HI’ to 7406303366

error: Content is protected !!
Exit mobile version