Home News Chikkaballapur ಪದವಿಯ ಜೊತೆಗೆ ಕೌಶಲಗಳು ಇದ್ದರೆ ಉದ್ಯೋಗ ದೊರೆಯುತ್ತದೆ : ಜಗದೀಶ್ ಮಯ್ಯ

ಪದವಿಯ ಜೊತೆಗೆ ಕೌಶಲಗಳು ಇದ್ದರೆ ಉದ್ಯೋಗ ದೊರೆಯುತ್ತದೆ : ಜಗದೀಶ್ ಮಯ್ಯ

0
Chikkaballapur Nagarjuna College Of Engineering & Technology NCET Convocation

Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಬಿಡಗಾನಹಳ್ಳಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ (Nagarjuna College Of Engineering & Technology) (NCET) ಮಂಗಳವಾರ 2020ರಿಂದ 2024ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ (convocation) ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯಾ ನ್ಯೂಪೋಲ್ಡ್ ಡಿಜಿಟಲ್‌ನ ಮುಖ್ಯಸ್ಥರಾದ ಜಗದೀಶ್ ಮಯ್ಯ “ಪದವಿಯ ಜೊತೆಗೆ ಕೌಶಲಗಳು ಇದ್ದರೆ ಉದ್ಯೋಗ ದೊರೆಯುತ್ತದೆ. ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತಿದ್ದು ಇಂದಿನ ಸ್ಪರ್ಧಾ ಜಗತ್ತಿಗೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸುತ್ತಿದೆ, ಪದವಿ ಪ್ರಮಾಣ ಪತ್ರ ದೊರೆತ ನಂತರ ಎಲ್ಲವೂ ಮುಗಿಯಿತು ಎನ್ನುವುದಲ್ಲ. ತರಬೇತಿ, ಕೌಶಲ ಎಲ್ಲರಿಗೂ ಅಗತ್ಯ. ಈ ಕ್ಷೇತ್ರದ ಜೊತೆಗೆ ಸಂಪರ್ಕ ಸಹ ಹೊಂದಿರಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಎಸ್‌.ಜಿ.ಗೋಪಾಲ ಕೃಷ್ಣ, ಪ್ರಾಂಶುಪಾಲ ರವಿಶಂಕರ್, ಸುರೇಶ್ ಜೆ ಮತ್ತಿತರರು ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version