Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ (Sadali) ಹೋಬಳಿಯ ಎಸ್ ದೇವಗಾನಹಳ್ಳಿ (Devaganahalli) ಗ್ರಾಮದ ರಾಮಸಮುದ್ರ ಕೆರೆ (Ramasamudra Lake) ಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಬಾಗಿನ ಅರ್ಪಿಸಿದರು.
ಹದಿನೈದು ವರ್ಷಗಳ ನಂತರ ರಾಮಸಮುದ್ರ ಕೆರೆ ಕೋಡಿ ಹರಿಯುತ್ತಿರುವುದು ಸಂತಸ ತಂದಿದೆ. ಒಟ್ಟು ಸುಮಾರು ಮೂರು ವರೆ ಸಾವಿರ ವಿಸ್ತೀರ್ಣ ಭೂಪ್ರದೇಶವನ್ನು ಹೊಂದಿದ್ದು ಕೆರೆಯ ಕೆಳಭಾಗದಲ್ಲಿ ಹದಿನೇಳು ಹಳ್ಳಿಗಳು ಬರುತ್ತವೆ. ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಕೆರೆಯ ೧೫% ರಷ್ಟು ನೀರನ್ನು ಬೆಳೆಗಳಿಗಾಗಿ ಹರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಮಂಜುನಾಥ ಮನವಿ ಮಾಡಿದರು.
ಜೆಡಿಎಸ್ ಮುಖಂಡ ಬಿ.ಎನ್ ಸಚಿನ್, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತನುಜಾ ರಘು, ಡಾ.ಧನಂಜಯರೆಡ್ಡಿ, ಸಾದಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲರೆಡ್ಡಿ, ಪೆದ್ದಪ್ಪಯ್ಯ, ಶ್ರೀನಿವಾಸ್, ನಿಲವರಾತಹಳ್ಳಿ ನಾಗರಾಜ, ವಿಜಯ ಕುಮಾರ್, ವೇಣು ಕಾರ್ಯಕ್ರಮದಲ್ಲಿ ಭಾಗವಹಿಸಿದರು.